ಸಿದ್ದಾರ್ಥ ಮಲ್ಹೋತ್ರಾ weds ಕಿಯಾರಾ ಅಡ್ವಾಣಿ

ಸಿದ್ದಾರ್ಥ ಮಲ್ಹೋತ್ರಾ weds ಕಿಯಾರಾ ಅಡ್ವಾಣಿ

ಬಾಲಿವುಡ್‌ನಲ್ಲಿ ಮತ್ತೊಂದು ಸ್ಟಾರ್ ಜೋಡಿ ಅಧಿಕೃತವಾಗಿ ಸತಿಪತಿಯಾಗಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ಸೈಲೆಂಟಾಗಿ ವಿವಾಹವಾಗಿದ್ದಾರೆ. 

ರಾಜಸ್ಥಾನದ ಜೈಸಲ್ಮಾರ್ ವೈಭವದ ಹೊಟೇಲ್‌ನಲ್ಲಿ ಸ್ಟಾರ್ ಜೋಡಿ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೇ ಕೆಲವು ಆಪ್ತರನ್ನಷ್ಟೇ ಮದುವೆಗೆ ಆಹ್ವಾನಿಸಲಾಗಿತ್ತು. ಮದುವೆಯ ಸಂಗತಿಯನ್ನ ಗುಟ್ಟಾಗೆ ಇಡಲಾಗಿತ್ತು. 

ಇದೀಗ ಸಿದ್ಧಾರ್ಥ್ ಹಾಗೂ ಕಿಯಾರಾ ಮದುವೆಯ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ "ಈಗ ನಮ್ಮ ಶಾಶ್ವತ ನೋಂದಣಿ ಆಗಿದೆ " ಎಂಬ ಬರಹದ ಮೂಲಕ ವಿಷಯ ಹಂಚಿಕೊಂಡಿದ್ದಾರೆ. ಕೊನೆಗೂ "ಶೇರ್ ಶಾ " ಜೋಡಿ ಮದುವೆ ಬಂಧನಕ್ಕೆ ಕಾಲಿಟ್ಟಿದೆ.