WPL 2024 Final: ಮತ್ತೆ ಕೈ ಹಿಡಿದ ಎಲ್ಲಿಸ್ ಪೆರ್ರಿ - ಡೆಲ್ಲಿ ವಿರುದ್ಧ ಗೆದ್ದು ಟ್ರೋಫಿಗೆ ಮುತ್ತಿಕ್ಕಿದ ಆರ್ ಸಿಬಿ

ನವದೆಹಲಿ: ಕೊನೆಯ ಹಂತದವರೆಗೂ ಭಾರಿ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಡೆಲ್ಲಿ ತಂಡವು 18.3 ಓವರ್‌ಗಳಲ್ಲಿ 113 ರನ್ ಗಳಿಸಿ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಆರ್ ಸಿಬಿ 19.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಗೆಲುವು ಸಾಧಿಸಿದೆ. ಇದರೊಂದಿಗೆ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ಇನ್ನು ಡೆಲ್ಲಿ ಎರಡನೇ ಬಾರಿಗೆ ಫೈನಲ್‌ನಲ್ಲಿ ಸೋಲು ಒಪ್ಪಿಕೊಂಡು ಟ್ರೋಫಿ ಕಳೆದುಕೊಂಡಿದೆ.
ಆರ್ ಸಿಬಿ ಪರ ನಾಯಕಿ ಸ್ಮೃತಿ ಮಂದಣ್ಣಾ 31 ರನ್, ಆರಂಭಿಕ ಬ್ಯಾಟರ್ ಸೋಫಿ ಡಿವೈನ್ 32 ರನ್, ಎಲ್ಲಿಸ್ ಪೆರ್ರಿ ಅಜೇಯ 35 ರನ್ ಹಾಗೂ ರಿಚಾ ಘೋಶ್ 17 ರನ್ ಗಳಿಸಿದರು.
ಇದಕ್ಕೂ ಡೆಲ್ಲಿ ಪರ ಶೆಫಾಲಿ ವರ್ಮಾ ಗರಿಷ್ಠ 44 ರನ್ ಹಾಗೂ ಆರಂಭಿಕ ಬ್ಯಾಟರ್ ಮೆಗ್ ಲ್ಯಾನ್ನಿಂಗ್ 22 ರನ್ ಗಳಿಸಿದ್ದರು. ಇನ್ನು ಆರ್ ಸಿಬಿ ಪರ ಸೋಫಿ ಮೊಲಿನೆಕ್ಸ್ ಆರಂಭಿಕ 3 ವಿಕೆಟ್ ಕಿತ್ತು ಆಟಕ್ಕೆ ಮಹತ್ವದ ತಿರುವು ನೀಡಿದ್ದರು. ಶ್ರೇಯಾಂಕಾ ಪಾಟೀಲ್ 4 ವಿಕೆಟ್ ಕಿತ್ತು ಮಿಂಚಿದರೆ, ಆಶಾ ಸೋಭಾನಾ 2 ವಿಕೆಟ್ ಉರಳಿಸಿದ್ದರು.