ಕುಂದಗೋಳ: ಉದ್ಘಾಟನೆ ಕಾಣದೆ ಹೊಸ ರೈತ ಸಂಪರ್ಕ ಕೇಂದ್ರ, ಇಲ್ಲಿ ಸಮಸ್ಯೆ ಕೇಳಂಗಿಲ್ಲಾ !

ಕುಂದಗೋಳ : ತಾಲೂಕಿನ ರೈತರಿಗೆ ಹೊಸ ರೈತ ಸಂಪರ್ಕ ಕೇಂದ್ರ ಭಾಗ್ಯ ಒದಗಿ ಬರೋ ಮಾತು ದಿನಾ ಕಳದ್ಹಂಗ ದೂರ ಹೊಂಟೈತಿ ನೋಡ್ರಿ, ಇಲ್ನೋಡ್ರಿ ಎಲ್ಲಾ ಪದ್ಧತ್ ಸಿರ್ ಕಾಣೋ ನೂತನ ರೈತ ಸಂಪರ್ಕ ಕೇಂದ್ರ ದ ಈ ಕಟ್ಟಡ ಯಾಕ್ ಉದ್ಘಾಟನೆ ಆಗಿಲ್ಲಾ ಅನ್ನೋದು ಬಾಳ್ ಮಂದಿ ರೈತರ್ ಪ್ರಶ್ನೇ ಐತಿ ಈಗ ಹೊಸಾ ಕಟ್ಟಡ ಸುತ್ತ್ ಕಸಾ ಬೆಳ್ಯಾಕತ್ತತಿ.
ಹೌದ್ ರೀ, ರೈತರು ಹಿಂಗ್ ಪ್ರಶ್ನೇ ಮಾಡಾಕು ಮುಖ್ಯ ಕಾರಣ ಐತಿ ಯಾಕಪ್ಪಾ ಅಂದ್ರೆ ಈ ಶತಮಾನ ಕಂಡ ಹಳೇ ಗೂಡೌನ್ ಒಯ್ದು ರೈತ ಸಂಪರ್ಕ ಕೇಂದ್ರ ಮಾಡಿ ಒಂದು ಕಡೆ ಹಿಂಗ್ ಅಧಿಕಾರಿಗಳ ಕುಂತ್ರ ಇನ್ನೋಂದು ಕಡೆ ಈ ಪಾಟಿ ಸಾಮಗ್ರಿ ತುಂಬ್ಯಾವ್, ಒಂದ್ ಸಿಸ್ಟಮೇಟಿಕ್ ಅನ್ನೋದ್ ಇಲ್ಲರೀ, ವಿಚಿತ್ರ ಏನಂದ್ರ ಈ ಹಳೇ ಕಟ್ಟಡದ ಒಳಗ ರೈತರ ಕಡತ, ದಾಖಲೆ ಸಂಗ್ರಹಿಸಿ ಇಡಾಕ್ ಕಂಪ್ಯೂಟರ್ ಆಪರೇಟರ್ ಮಾಡಾಕ ಸ್ವತಃ ಅಧಿಕಾರಿಗಳೇ ತೊಂದರೆ ಐತಿ ಆದ್ರೂ ಇಲ್ಲಿ ಮಟಾ ಯಾರಿಗೆ ಹೇಳದೆ ವ್ಯವಸ್ಥೆ ನೋಡಿ ಗಪ್ ಅದಾರ್.
ಆದ್ರ, ಇಲಿ, ಹೆಗ್ಗಣ, ಇರುವೆ, ಮಳೆ ಈ ಗೂಡೌನ್ ಕಥಿ ಕೇಳಬೇಕ್ ಅಲ್ಲ, ಅವು ಈ ಹಳೇ ರೈತ ಸಂಪರ್ಕ ಕೇಂದ್ರದಾಗ ತಾಡಪತ್ರಿ, ಗೊಬ್ಬರ, ಎಣ್ಣೆ ಪಂಪ್, ಬೀಜ ಚೀಲ ಕಡದ್ ಕಡದ್ ಹಾಳ್ ಮಾಡಾಕತ್ತಾವ್ ಅಂತ್ ಇದು ನಮಗೆ ರೈತರ್ ಹೇಳಿದ್ದ್ ಮೇಲೆ ಗೊತ್ತು.