ಮೋದಿ ಜೊತೆಗೆ ಚರ್ಚೆಗೆ ನಾನು ಸಿದ್ದ : ಪಾಕ್ ಪ್ರಧಾನಿ ಆಹ್ವಾನ

ಇಸ್ಲಾಮಾಬಾದ್ : ಟಿವಿಯಲ್ಲಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಇಷ್ಟ ಎಂದು ಸಂದರ್ಶನವೊಂದರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ. ಭಾರತ ಮತ್ತು ಪಾಕ್ ನಡುವಿನ ಹದಗೆಟ್ಟ ಸಂಬಂಧ ಸುಧಾರಣೆಯ ಇಂಗಿತ ವ್ಯಕ್ತಪಡಿಸಿದ ಇಮ್ರಾನ್ ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಾದರೆ, ಭಾರತ ಉಪಖಂಡದ ಕೋಟ್ಯಂತರ ಜನರಿಗೆ ಪ್ರಯೋಜನಕಾರಿಯಾಗಬಹುದು ಎಂದಿದ್ದಾರೆ. ಭಾರತವು ಪ್ರತಿಕೂಲ ದೇಶವಾಗಿದೆ. ಹೀಗಾಗಿ ಅದರೊಂದಿಗೆ ವ್ಯಾಪಾರ ವಹಿವಾಟು ಕಡಿಮೆಯಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.