ದೇವನಹಳ್ಳಿ: ಇಂದು ದುಬೈ, ಲಂಡನ್‌ 6 ಪ್ರಯಾಣಿಕರಲ್ಲಿ ಒಮಿಕ್ರಾನ್‌ !

ದೇವನಹಳ್ಳಿ: ಇಂದು ದುಬೈ, ಲಂಡನ್‌  6 ಪ್ರಯಾಣಿಕರಲ್ಲಿ ಒಮಿಕ್ರಾನ್‌ !

ದೇವನಹಳ್ಳಿ: ಇಂದು ಬೆಳಗ್ಗೆ ವಿದೇಶಗಳಿಂದ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಲ್ಲಿ ಒಮಿಕ್ರಾನ್‌ ಪತ್ತೆಯಾಗಿದೆ. ಲಂಡನ್ ನಿಂದ ಬಂದ ಓರ್ವ ಹಾಗೂ ದುಬೈನಿಂದ ಬಂದ ಐವರಿಗೆ ಆರ್‌ ಟಿಪಿಸಿಆರ್ ಟೆಸ್ಟ್ ವೇಳೆ ಸೋಂಕು ದೃಢ ಪಟ್ಟಿದೆ. ದಿನದಿಂದ ದಿನಕ್ಕೆ ವಿದೇಶದಿಂದ ಬರುತ್ತಿರುವವರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸೋಂಕಿತರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸ್ಯಾಂಪಲ್ ಪಡೆದು ಜಿನೋಟಿಕ್ ಸೀಕ್ವೆನ್ಸ್ ನ ಹೆಚ್ಚಿನ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿದೆ. ಆರೋಗ್ಯ ಅಧಿಕಾರಿಗಳಿಗೂ ಸೋಂಕು ಹೆಚ್ಚಳ ತಲೆನೋವಾಗಿ ಪರಿಣಮಿಸಿದ್ದು, ಏರ್‌ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಆತಂಕ ಕಾಡುತ್ತಿದೆ.