ಇಂದು ರಾಜ್ಯಾದ್ಯಂತ ಬೃಹತ್ ಲಸಿಕಾ ಮೇಳ: ಎಲ್ಲರೂ ಡೋಸ್ ಪಡೆಯಿರಿ

ಬೆಂಗಳೂರು : ಇಂದು (ಸೆ.17) ರಾಜ್ಯಾದ್ಯಂತ ಬೃಹತ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ಈ ಬೃಹತ್ ಲಸಿಕಾ ಮೇಳಕ್ಕಾಗಿ ಜಿಲ್ಲೆಗಳಿಗೆ 34 ಲಕ್ಷ ಕೋವಿಡ್-19 ಲಸಿಕಾ ಡೋಸ್ ಗಳನ್ನು ಸರಬರಾಜು ಮಾಡಲಾಗಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 4.8 ಕೋಟಿ ಕೋವಿಡ್ ಲಸಿಕಾ ಡೋಸ್ ನೀಡಲಾಗಿದೆ. ಲಸಿಕಾಕರಣವನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ, ಇಂದು ರಾಜ್ಯಾದ್ಯಂತ ಬೃಹತ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ.
ಇಂದು ನಡೆಯಲಿರುವ ಬೃಹತ್ ಲಸಿಕಾ ಮೇಳಕ್ಕೆ 12,700 ಸರ್ಕಾರಿ ಕೋವಿಡ್-19 ಲಸಿಕಾ ಕೇಂದ್ರಗಳು, 300 ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳು ಹಾಗೂ 14,666 ಲಸಿಕಾ ಸತ್ರಗಳು ಕಾರ್ಯಪ್ರವೃತ್ತವಾಗಲಿವೆ.