ಹುಬ್ಬಳ್ಳಿ: 40 ಟನ್ ಪಡಿತರ ಅಕ್ಕಿ ವಶಪಡಿಸಿಕೊಂಡ ಕಸಬಾಪೇಟ ಪೊಲೀಸರು

ಹುಬ್ಬಳ್ಳಿ: ಹಾವೇರಿಯಿಂದ ಗುಜರಾತ್‌ನ ಗಾಂಧಿಧಾಮಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 8.80 ಲಕ್ಷ ರೂ. ಮೌಲ್ಯದ 40 ಟನ್ ಪಡಿತರ ಅಕ್ಕಿಯನ್ನು, ಕಸಬಾಪೇಟೆ ಪೊಲೀಸರು ನಿನ್ನೆ ಲಾರಿಸಮೇತ ವಶಪಡಿಸಿಕೊಂಡಿದ್ದಾರೆ. ಹಾವೇರಿ ಎಪಿಎಂಸಿಯ ಶಿವಾ ಟ್ರೇಡರ್‌ನಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ 16 ಚಕ್ರದ ಲಾರಿಯಲ್ಲಿ 400 ಕ್ವಿಂಟಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಸಬಾಪೇಟೆ ಪೊಲೀಸರು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಲಾರಿಯನ್ನು ಗಬ್ಬೂರ ಬೈಪಾಸ್ ಬಳಿ ತಡೆದು, ಅಕ್ಕಿ ಸಮೇತ ಚಾಲಕ ಮತ್ತು ಲಾರಿ ವಶಪಡಿಸಿಕೊಂಡಿದ್ದಾರೆ. ಕಸಬಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿಯ ಮಾಲೀಕ ಮತ್ತು ಏಜೆನ್ಸಿಯ ಮಾಲೀಕನ ಪತ್ತೆ ಕೈಗೊಂಡಿದ್ದಾರೆ.