IND vs SL 1st Test, Day 2: ಜಡೇಜಾ ಶತಕ- ಭೋಜನ ವಿರಾಮಕ್ಕೆ ಭಾರತ 468/7

IND vs SL 1st Test, Day 2: ಜಡೇಜಾ ಶತಕ- ಭೋಜನ ವಿರಾಮಕ್ಕೆ ಭಾರತ 468/7

ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಬ್ಯಾಟಿಂಗ್ ನಡೆಸಿದೆ. ಎರಡನೇ ದಿನವಾದ ಇಂದು ಭೋಜನ ವಿರಾಮದ ಸಮಯವಾಗಿದ್ದು, ಭಾರತವು 7 ವಿಕೆಟ್ ನಷ್ಟಕ್ಕೆ 468 ರನ್ ಕಲೆಹಾಕಿದೆ. ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದ್ದರೆ ಇತ್ತ ರವೀಂದ್ರ ಜಡೇಜಾ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. 160 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ ಜಡೇಜಾ ಟೆಸ್ಟ್ ಕ್ರಿಕೆಟ್​​ನಲ್ಲಿ ಎರಡನೇ ಶತಕ ಪೂರೈಸಿದರು. ಇನ್ನು ಆರ್. ಅಶ್ವಿನ್ 61 ರನ್‌ ಗಳಿಸಿ ಔಟಾದರೆ, ರವೀಂದ್ರ ಜಡೇಜಾ 102 ರನ್‌ ಸಿಡಿಸಿ ಕ್ರೀಸ್​ನಲ್ಲಿದ್ದಾರೆ. ಇವರಿಗೆ ಜಯಂತ್ ಯಾದವ್ (2 ರನ್) ಸಾಥ್ ನೀಡುತ್ತಿದ್ದಾರೆ.