ಮೊದಲ ಪಂದ್ಯ ಗೆದ್ದ ಆರ್‌ಸಿಬಿಗೆ ಭಾರಿ ಆಘಾತ..!

ಐಪಿಎಲ್ 16ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಟಾರ್ ಆಟಹಾರ ರಜತ್ ಪಾಟಿದಾರ್ ಗಾಯದ ಸಮಸ್ಯೆಯಿಂದ ಇಡೀ ಸೀಸನ್ ಹೊರಗುಳಿದಿದ್ದಾರೆ.
RCB ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಈ ಮಾಹಿತಿ ನೀಡಿದೆ. ಪಾಟಿದಾರ್ ಅಲಭ್ಯತೆ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗಿದೆ. ಕಳೆದ ಸೀಸನ್‌ನಲ್ಲಿ ಪಾಟಿದಾರ್ ಅದ್ಭುತ್ ಬ್ಯಾಟಿಂಗ್ ಪ್ರದರ್ಶಿಸಿದ್ದರು.