ಹುಬ್ಬಳ್ಳಿ : ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ 26 ಎಲೆಕ್ಟ್ರಿಕ್‌ ಆಟೋ ವಿತರಣೆ

ಹುಬ್ಬಳ್ಳಿ : ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ 26 ಎಲೆಕ್ಟ್ರಿಕ್‌ ಆಟೋ ವಿತರಣೆ

ಹುಬ್ಬಳ್ಳಿ : 75 ನೇ ಗಣರಾಜ್ಯೋತ್ಸವದ ಅಂಗವಾಗಿ ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ 26 ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ, ಸಂತೋಷ್ ಲಾಡ್ ಫೌಂಡೇಶನ್ ರೂವಾರಿ ಸಂತೋಷ್ ಲಾಡ್ ವಿತರಿಸಿದರು‌. 

ಹುಬ್ಬಳ್ಳಿಯ ಭೈರಿದೇವರಕೊಪ್ಪದ ಪಿ ಬಿ ರಸ್ತೆಯ ದರ್ಗಾ ಹತ್ತಿರದ ಹಿಂದೂಸ್ತಾನ್‌ ಮೋಟಾರ್ಸ್‌ನಲ್ಲಿ ಈ ಆಟೋಗಳನ್ನು ವಿತರಣೆ ಮಾಡಲಾಯಿತು. ಈ ಆಟೋಗಳಿಗೆ ಡೌನ್‌ಪೇಮೆಂಟ್‌ ಮಾಡಲಾಗಿದ್ದು, ಬ್ಯಾಂಕ್‌ನ ಲೋನ್‌ ಸೌಲಭ್ಯವನ್ನೂ ಒದಗಿಸಿ ವಿತರಿಸಲಾಗಿದ್ದು ವಿಶೇಷ. 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಂತೋಷ್‌ ಲಾಡ್‌, ನಮ್ಮ ಫೌಂಡೇಶನ್‌ ಒಂದಲ್ಲ ಒಂದು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದು ಇಂದು ಎಲೆಕ್ಟ್ರಿಕ್‌ ಆಟೊಗಳನ್ನು ನೀಡಿದೆ. ಇವುಗಳು ಅವರ ಜೀವನಕ್ಕೆ ನೆರವಾಗಲಿವೆ. ಇವುಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಚಾಲಕರಿಗೆ ಕಿವಿಮಾತು ಹೇಳಿದರು. 

ಮಾಲಿನ್ಯ ಮುಕ್ತ ವಾತಾವರಣ ನಿರ್ಮಿಸುವಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಂತೋಷ್‌ ಲಾಡ್‌ ಫೌಂಡೇಶನ್‌ ಸಹ ಸುಸ್ಥಿರ ವಾತಾವರಣಕ್ಕೆ ಕೊಡುಗೆ ನೀ

ಡಿದೆ.