ಜನವರಿ 28 ರಂದು ಸರ್ದಾರ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ

ಬೀದರ್: ಗುರುನಾನಕ ದೇವ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಸರದಾರ ಜೋಗಾಸಿಂಗ್‌ಜಿ ಅವರ 91ನೇ ಜನ್ಮ ದಿನಾಚರಣೆ ನಿಮಿತ್ಯ ರವಿವಾರ ದಿನಾಂಕ 28 ಕಾಲೇಜಿನಲ್ಲಿರುವ ಗುರು ನಾನಕ ಭವನ್‌ದಲ್ಲಿ ಸರ್ದಾರ ಜೋಗಾ ಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭವು ಕ್ರೀಡೆ, ಸಮಾಜ ಸೇವೆ, ಶಿಕ್ಷಣ, ಮಾನವಿಕ ವಿಷಯಗಳಂತಹ ತಮ್ಮ ಆಯ್ದ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಜನರನ್ನು ಗುರುತಿಸುವ ಮತ್ತು ಗೌರವಿಸುವ ಗುರಿಯನ್ನು ಹೊಂದಿದೆ. ಪ್ರಶಸ್ತಿಯನ್ನು 2022-23 ರಲ್ಲಿ ಸ್ಥಾಪಿಸಲಾದ್ದು, 1966 ರಲ್ಲಿ "ಬುದ್ಧಿವಂತಿಕೆಯ ಸಾರವು ಮಾನವೀಯತೆಯ ಸೇವೆ" ಎಂಬ ಧ್ಯೇಯವಾಕ್ಯದೊಂದಿಗೆ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ಸಂಸ್ಥೆ ಪ್ರಾರಂಭಿಸುವ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಸರ್ದಾರ್ ಜೋಗಾ ಸಿಂಗ್‌ಜಿಯವರ ಸಮಾಜಕ್ಕೆ ಸೇವೆ ಸಲ್ಲಿಸುವ ಪರಂಪರೆಯನ್ನು ಮುಂದುವರೆದಿದೆ. ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ನೀಡುತ್ತಿದೆ. ಅಗತ್ಯವಿರುವವರಿಗೆ ಆರೋಗ್ಯ ಮತ್ತು ಪರೋಪಕಾರಿ ಸೇವೆಗಳು ನಡೆಯುತ್ತಿವೆ. ಹೀಗಾಗಿ, ಸಮಗ್ರ ಮತ್ತು ವಿಶೇಷವಾದ ವಿಧಾನದೊಂದಿಗೆ ಬೀದರ್ ಜಿಲ್ಲೆಯ ಜನರ ಉನ್ನತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 14 ಜನರಿಗೆ ಸರದಾರ ಜೋಗಾಸಿಂಗ್ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಗುರುನಾನಕ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ತಿಳಿಸಿದರು.