ಏಪ್ರಿಲ್ 10 ಮತದಾರರ ಪಟ್ಟಿಗೆ ಹೆಸರು ಎಂಟ್ರಿಗೆ ಲಾಸ್ಟ್ ಡೇಟ್

ಏಪ್ರಿಲ್ 10 ಮತದಾರರ ಪಟ್ಟಿಗೆ ಹೆಸರು ಎಂಟ್ರಿಗೆ ಲಾಸ್ಟ್ ಡೇಟ್

ಧಾರವಾಡ : ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದರ ನಡುವೆಯೂ ಯುವ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಜಿಲ್ಲಾಡಳಿತ ಏಪ್ರಿಲ್ 10 ರ ವರೆಗೆ ಅವಕಾಶ ಕಲ್ಪಿಸಿದೆ. 

 

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಗುರುದತ್ತ ಹೆಗಡೆ ಅವರು, ಅರ್ಹ ಮತದಾರರು, ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆಯಾಗಿರುವ ಬಗ್ಗೆ https://ceo.karnataka.gov.in, https://www.nvsp.in ವೆಬ್ ಸೈಟ್ ಗಳಲ್ಲಿ ಹಾಗೂ Voter Helpline ಆಪ್ ನಲ್ಲಿ ಮತ್ತು ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ. 

 

ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರುಗಳು ಸೇರ್ಪಡೆಯಾಗದೇ ಇದ್ದಲ್ಲಿ, ಅಂಥಹ ಅರ್ಹ ಮತದಾರರು ದಿನಾಂಕ:10.04.2023 ರೊಳಗೆ https://www.nvsp.in ವೆಬ್ ಸೈಟ್ ನಲ್ಲಿ ಅಥವಾ Voter Helpline ಆಪ್ ನಲ್ಲಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ. 

 

2004ರಲ್ಲಿ ಜನಿಸಿದ ಪ್ರತಿಯೊಬ್ಬರೂ 2023ರ ಏಪ್ರಿಲ್ 1 ಕ್ಕೆ 18 ವರ್ಷ ಪೂರ್ಣಗೊಳಿಸುತ್ತಾರೆ. ಇಂತಹವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಏಪ್ರಿಲ್ 10 ರ ನಂತರ ನಮೂನೆ-6 ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಈ ಚುನಾವಣೆ ಮುಗಿದ ನಂತರ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

ಮಾರ್ಚ್ 29 ರಂದು ಸಾರ್ವತ್ರಿಕ ಚುನಾವಣೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20 (ಗುರುವಾರ) ಆಗಿದೆ ಎಂದು ಅವರು ತಿಳಿಸಿದ್ದಾರೆ.