ಅಮೆರಿಕ ವ್ಹೈಟ್ ಹೌಸ್ ನಲ್ಲಿ ಮೋದಿ: ಜೋ ಬೈಡನ್ ರಿಂದ ಆತ್ಮೀಯ ಸ್ವಾಗತ

ಅಮೆರಿಕ ವ್ಹೈಟ್ ಹೌಸ್ ನಲ್ಲಿ ಮೋದಿ: ಜೋ ಬೈಡನ್ ರಿಂದ ಆತ್ಮೀಯ ಸ್ವಾಗತ

ವಾಷಿಂಗ್ಟನ್ ಡಿ.ಸಿ (ಯುಎಸ್): ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಅಲ್ಲಿನ ಅಧ್ಯಕ್ಷರ ವ್ಹೈಟ್ ಹೌಸ್ ಗೆ ಭೇಟಿ ಕೊಟ್ಟಿದ್ದಾರೆ. ಅಧ್ಯಕ್ಷ ಜೋ ಬೈಡನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ‌. ದ್ವಿಪಕ್ಷೀಯ ಮಾತುಕತೆಗಾಗಿ ಪ್ರಧಾನಿ ಮೋದಿ ವ್ಹೈಟ್ ಹೌಸ್ ಗೆ ತೆರಳಿದ್ದಾರೆ. ನಂತರ ಅಂತರಾಷ್ಟ್ರೀಯ ವಿದ್ಯಮಾನ, ಕೋವಿಡ್ ಬಿಕ್ಕಟ್ಟು, ಹಾಗೂ ಭಾರತ-ಅಮೆರಿಕ ಆಂತರಿಕ ಸಂಬಂಧಗಳ ಬಗ್ಗೆ ಮೋದಿ-ಬೈಡನ್ ಚರ್ಚಿಸಿದರು.