ಸಿನಿಮಾ ಟಿಕೆಟ್, ಒಟಿಟಿ ಚಂದಾದಾರಿಕೆ ಶುಲ್ಕದ ಮೇಲೆ 2%ರಷ್ಟು ಸೆಸ್ ವಿಧಿಸುವ ಮಸೂದೆ ಅಂಗೀಕಾರ

ಸಿನಿಮಾ ಟಿಕೆಟ್, ಒಟಿಟಿ ಚಂದಾದಾರಿಕೆ ಶುಲ್ಕದ ಮೇಲೆ 2%ರಷ್ಟು ಸೆಸ್ ವಿಧಿಸುವ ಮಸೂದೆ ಅಂಗೀಕಾರ

ಬೆಂಗಳೂರು : ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್ ಮತ್ತು ಒಟಿಟಿ ಚಂದಾದಾರಿಕೆ ಶುಲ್ಕದ ಮೇಲೆ 2%ರಷ್ಟು ಸೆಸ್ ವಿಧಿಸುವ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. 

ಜುಲೈ 2024ರಲ್ಲಿ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆಯನ್ನ ಕರ್ನಾಟಕ ವಿಧಾನಸಭೆ ಅಂಗೀಕರಿಸಿತು. ಇದರ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿತು. ಗೆಹ್ಲೋಟ್ ಸೆಪ್ಟೆಂಬರ್ 23ರಂದು ತಮ್ಮ ಒಪ್ಪಿಗೆಯನ್ನು ನೀಡಿದರು. 

ಈ ಕಾಯ್ದೆಯ ಪ್ರಕಾರ, ರಾಜ್ಯದೊಳಗಿನ ಸಿನೆಮಾ ಟಿಕೆಟ್‌ಗಳು, ಚಂದಾದಾರಿಕೆ ಶುಲ್ಕ ಮತ್ತು ಸಂಬಂಧಿತ ಆದಾಯಗಳ ಮೇಲೆ 'ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಸೆಸ್' ವಿಧಿಸಲಾಗುವುದು. ಸರ್ಕಾರವು ಸೂಚಿಸಿದಂತೆ ಸೆಸ್ ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಣೆಯೊಂದಿಗೆ ಶೇಕಡಾ 1 ರಿಂದ 2 ರ ನಡುವೆ ಇರುತ್ತದೆ.