ಕೊಪ್ಪ: ಅನ್ನ ಭಾಗ್ಯ ಯೋಜನೆಯಲ್ಲಿ ಹಣದ ಬದಲು ಐದು ಕೆ.ಜಿ ಅಕ್ಕಿ ವಿತರಣೆ

ಕೊಪ್ಪ : ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಉಚಿತವಾಗಿ ವಿತರಿಸಲಾಗುವ ಆಹಾರ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಯೋಜನೆಯಡಿ ನೀಡುತ್ತಿರುವ ಹಣದ ಬದಲಿಗೆ 5 ಕೆಜಿ ಅಕ್ಕಿಯನ್ನು ಫೆಬ್ರವರಿ ತಿಂಗಳಿಗೆ ಅನ್ವಯವಾಗುವಂತೆ ವಿತರಿಸಲು ಸರಕಾರ ಆದೇಶಿಸಿದೆ ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಆದೇಶದಂತೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಸೇರಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪಡಿತರ ವಿತರಣಾ ಪ್ರಮಾಣವನ್ನು ಸರಕಾರ ನಿಗಧಿ ಮಾಡಿದ್ದು, 1 ರಿಂದ 3 ಸದಸ್ಯರಿರುವ ಕುಟುಂಬಕ್ಕೆ 35 ಕೆಜಿ ಅಕ್ಕಿ 4 ಸದಸ್ಯರಿರುವ ಕುಟುಂಬಕ್ಕೆ 45 ಕೆಜಿ, 5 ಸದಸ್ಯರಿರುವ ಕುಟುಂಬಕ್ಕೆ 65 ಕೆಜಿ, 6 ಸದಸ್ಯರಿರುವ ಕುಟುಂಬಕ್ಕೆ 85 ಕೆಜಿ, 7 ಸದಸ್ಯರಿರುವ ಕುಟುಂಬಕ್ಕೆ 105 ಕೆಜಿ, 8 ಸದಸ್ಯರಿರುವ ಕುಟುಂಬಕ್ಕೆ 125, 9 ಸದಸ್ಯರಿರುವ ಕುಟುಂಬಕ್ಕೆ 145 ಕೆಜಿ, 10 ಸದಸ್ಯರಿರುವ ಕುಟುಂಬಕ್ಕೆ 165, 11ಸದಸ್ಯರಿರುವ ಕುಟುಂಬಕ್ಕೆ 185, 12 ಸದಸ್ಯರಿರುವ ಕುಟುಂಬಕ್ಕೆ 205 ಕೆಜಿ ಅಕ್ಕಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.