ಕೋವಿಡ್ ನಿಯಮ ಉಲ್ಲಂಘನೆ - ಗರುಡಾ ಮಾಲ್‌ಗೆ ದಂಡ

ಕೋವಿಡ್ ನಿಯಮ ಉಲ್ಲಂಘನೆ - ಗರುಡಾ ಮಾಲ್‌ಗೆ ದಂಡ

ಬೆಂಗಳೂರು: ಕೋವಿಡ್ ನಿಯಮಾವಳಿಗಳನ್ನ ಪಾಲಿಸದ ಗರುಡಾ ಮಾಲ್ ಗೆ ನೊಟೀಸ್ ಜಾರಿ ಮಾಡಿರುವ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಕೊರೊನಾ ವೈರಾಣುವಿನ ರೂಪಾಂತರಿ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದರೆ ನಿಯಮಗಳನ್ನು ಬಿಗಿಗೊಳಿಸಿದ್ದು, ಮಾಲ್ ಮತ್ತು ಸಿನಿಮಾ ಮಂದಿರ ಪ್ರವೇಶಿಸುವ ಸಾರ್ವಜನಿಕರ ಎರಡು ಡೋಸ್ ಲಸಿಕೆ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಲಸಿಕೆ ಪಡೆಯದವರಿಗೆ ಪ್ರವೇಶ ನೀಡಬಾರದೆಂದು ಸೂಚಿಸಲಾಗಿದೆ. ಆದರೆ ಅಶೋಕ್ ನಗರದಲ್ಲಿರುವ ಗರುಡಾ ಮಾಲ್ ನಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡ್ತಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ 20 ಸಾವಿರ ರೂ. ದಂಡ ಬಿಬಿಎಂಪಿ ಹಾಕಿದೆ.