ಕೋವಿಡ್ ಪತ್ತೆ ಪರೀಕ್ಷೆ : ಕರ್ನಾಟಕ್ಕೆ 2ನೇ ಸ್ಥಾನ

ಬೆಂಗಳೂರು: ಹೆಮ್ಮಾರಿ ಸೋಂಕು ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದ್ದು ಜಾಗೃತಿವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಸದ್ಯ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ತೆಗೆದು ಸ್ವಲ್ಪ ರಿಲ್ಯಾಕ್ಷೇಶನ್ ನೀಡಿದ್ದಾರೆ. ಆದ್ರೆ ಸೋಂಕಿನ ಪ್ರಯಾಣ ಿನ್ನೂ ತಗ್ಗಿಲ್ಲ. ಸದ್ಯ ರಾಜ್ಯದಲ್ಲಿ ಈವರೆಗೆ ನಡೆಸಲಾದ ಒಟ್ಟು ಕೊರೊನಾ ಪತ್ತೆ ಪರೀಕ್ಷೆಗಳ ಸಂಖ್ಯೆ 6 ಕೋಟಿಯ ಗಡಿ ದಾಟಿದೆ. ದೇಶದಲ್ಲಿ ಗರಿಷ್ಠ ಪರೀಕ್ಷೆಗಳನ್ನು ನಡೆಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಆಗ ರಾಜ್ಯದಲ್ಲಿ 268 ಕೋವಿಡ್ ಪರೀಕ್ಷೆಗೆ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ದೈನಂದಿನ ಪರೀಕ್ಷೆ ಸಾಮರ್ಥ್ಯ 2.50 ಲಕ್ಷಕ್ಕೆ ಏರಿಕೆಯಾಗಿದೆ. 2020ರಲ್ಲಿ 1.41 ಕೋಟಿ ಪರೀಕ್ಷೆಗಳು, 2021ರಲ್ಲಿ 4.23 ಕೋಟಿ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ. ಈ ವರ್ಷ ಈಗಾಗಲೇ 35.27 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೋವಿಡ್ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ವಾರದಿಂದ ದೈನಂದಿನ ಪರೀಕ್ಷೆಗಳ ಸಂಖ್ಯೆ 2 ಲಕ್ಷದ ಆಸುಪಾಸಿನಲ್ಲಿದೆ. ರಾಜ್ಯದಲ್ಲಿ ನಡೆಸಲಾದ ಒಟ್ಟು ಕೋವಿಡ್ ಪರೀಕ್ಷೆಗಳಲ್ಲಿ ಶೇ 70 ರಷ್ಟು ಪರೀಕ್ಷೆಗಳನ್ನು ಆರ್ಟಿ–ಪಿಸಿಆರ್ ವಿಧಾನದ ಮೂಲಕ ನಡೆಸಲಾಗಿದೆ. ಶೇ 30 ರಷ್ಟು ಪರೀಕ್ಷೆಗಳನ್ನು ರ್‍ಯಾಪಿಡ್ ಆ್ಯಂಟಿಜೆನ್ ವಿಧಾನದಲ್ಲಿ ಮಾಡಲಾಗಿದೆ.