ಶೀಘ್ರದಲ್ಲೇ ₹10, ₹500ರ ಮುಖಬೆಲೆಯ ಹೊಸ ನೋಟು ಬಿಡುಗಡೆ

ನವದೆಹಲಿ : ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ 10 ರೂ. ಹಾಗೂ 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ. ಈ ಹೊಸ ನೋಟುಗಳಲ್ಲಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರಲಿದೆ.
ಈಗಾಗಲೇ ಇರುವ ಮಹಾತ್ಮ ಗಾಂಧಿ ಸರಣಿಯ ಈ ನೋಟುಗಳಿಗಿಂತ ಹೊಸ ನೋಟುಗಳು ಭಿನ್ನವಾಗಿರುವುದಿಲ್ಲ. ಅದೇ ವಿನ್ಯಾಸವಿರುತ್ತದೆ, ಸಹಿ ಮಾತ್ರ ಬೇರೆಯಾಗಿರುತ್ತದೆ.
ಪಿಟಿಐ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಆರ್‌ಬಿಐ ಮಹಾತ್ಮಾ ಗಾಂಧಿ ಸರಣಿಯ ಹಳೆಯ 10 ರೂ. ಮತ್ತು 500 ರೂ. ನೋಟುಗಳು ಮೊದಲಿನಂತೆ ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಇರುತ್ತವೆ ಎಂದು ಸ್ಪಷ್ಟಪಡಿಸಿದೆ. ಅಂದರೆ, ಈ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಯಾವುದೇ ಯೋಜನೆ ಆರ್‌ಬಿಐಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ.