ಬೆಲೆ ಏರಿಕೆ ನಿಭಾಯಿಸಲು ಕೇಂದ್ರ ಯತ್ನ- ಶೀಘ್ರ ಬಿಡುಗಡೆ ಭಾರತ್ ಅಕ್ಕಿ

ನವದೆಹಲಿ : ಅತ್ಯವಶ್ಯಕ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವನ್ನು ನಿಭಾಯಿಸುವ ಪ್ರಯತ್ನಗಳ ಅಂಗವಾಗಿ ಪ್ರತಿ ಕೆ.ಜಿ.ಗೆ 25 ರೂಪಾಯಿಗಳ ರಿಯಾಯಿತಿ ದರದಲ್ಲಿ "ಭಾರತ್ ರೈಸ್" ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರತ್ ಅಟ್ಟಾ ಹಾಗೂ ಭಾರತ್ ದಾಲ್ ಈ ಆಹಾರವನ್ನು ರಿಯಾಯಿತಿ ದರದಲ್ಲಿ ಯಶಸ್ವಿಯಾಗಿ ಬಿಡುಗಡೆಗೊಳಿಸಿದ ಬಳಿಕ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ, ಕೇಂದ್ರೀಯ ಭಂಡಾರ ಮಳಿಗೆಗಳು ಹಾಗೂ ಮೊಬೈಲ್ ವ್ಯಾನ್ ಗಳಂತಹ ಸರ್ಕಾರಿ ಸಂಸ್ಥೆಗಳ ಮೂಲಕ ಭಾರತ್ ಅಕ್ಕಿ ಜನರಿಗೆ ದೊರಕಲಿದೆ.