ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ - ವಾಣಿಜ್ಯ ಸಿಲಿಂಡರ್‌ಗಳ ದರದಲ್ಲಿ 157 ರೂಪಾಯಿ ಇಳಿಕೆ

ನವದೆಹಲಿ : ಅಡುಗೆ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂಪಾಯಿ ಕಡಿತ ಮಾಡಿ ದೇಶ ವಾಸಿಗಳಿಗೆ ಸಿಹಿ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಂದಿನಿಂದ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ದರವನ್ನು 157 ರೂ. ಕಡಿಮೆ ಮಾಡಿ ದೇಶ ವಾಸಿಗಳ ಕೊಂಚ ಹೊರೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ.
ಈ ದರಗಳು ಇಂದಿನಿಂದ ಅಂದರೆ ಸೆಪ್ಟೆಂಬರ್ 1 ರಿಂದ ಅನ್ವಯವಾಗುತ್ತವೆ. ದೆಹಲಿಯಲ್ಲಿ 1680 ರೂ.ಗಳ ಬದಲು 1522.50 ರೂ.ಗೆ, ಕೋಲ್ಕತ್ತಾದಲ್ಲಿ 1802.50 ರೂ.ಗಳ ಬದಲು 1636 ರೂ.ಗೆ ಲಭ್ಯವಿದೆ. ಅಂತೆಯೇ, ಈ ಹಿಂದೆ ಮುಂಬೈನಲ್ಲಿ ಅದರ ಬೆಲೆ 1640.50 ರೂ.ಗಳಿಂದ ಈಗ 1482 ರೂ.ಗೆ ಇಳಿದಿದೆ.