ದುಬೈನಲ್ಲಿಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ

ದುಬೈನಲ್ಲಿಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ

ದುಬೈ : ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿಗೆ ಇದೀಗ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಚಾಂಪಿಯನ್ಸ್‌ ಟ್ರೋಫಿಯ ಬಹುನಿರೀಕ್ಷಿತ ಪಂದ್ಯ ಇಂದು ನಡೆಯಲಿದ್ದು, ಬದ್ಧವೈರಿಗಳ ಕದನ ಕ್ರಿಕೆಟ್‌ ಜಗತ್ತಿಗೆ ಕುತೂಹಲ ಕೆರಳಿಸಿದೆ. ಅದರಲ್ಲೂ ಟೂರ್ನಿಗೂ ಮುನ್ನ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಡುವಿನ ತಿಕ್ಕಾಟ, ಈ ಪಂದ್ಯಕ್ಕೆ ಮತ್ತಷ್ಟು ಕಿಚ್ಚು ಹಚ್ಚಲಿದೆ. 

ರಾಜಕೀಯ ಹಲವು ಭಿನ್ನಾಭಿಪ್ರಾಯಗಳಿಂದಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದು. ಉಭಯ ತಂಡಗಳ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. 

ಏಕದಿನ ಪಂದ್ಯಗಳಲ್ಲಿ ಭಾರತ ಪಾಕಿಸ್ತಾನದ ನಡುವೆ ಒಟ್ಟು 2018ರಿಂದ ನಡೆದ 73 ಪಂದ್ಯಗಳಲ್ಲಿ ಭಾರತ ಒಟ್ಟು 57 ಪಂದ್ಯಗಳಲ್ಲಿ ಗೆದ್ದು ಮುನ್ನಡೆಯಲ್ಲಿದೆ. ಆದ್ರೆ 2018 ರಿಂದ ಇಲ್ಲಿಯವರೆಗೂ ಈ ಉಭಯ ತಂಡಗಳು ಕೇವಲ 6 ಬಾರಿ ಮುಖಾಮುಖಿಯಾಗಿವೆ. 

ಈ ಆರು ಪಂದ್ಯಗಳಲ್ಲಿಯೂ ಭಾರತ ಭರ್ಜರಿ ವಿಜಯ ಸಾಧಿಸಿದೆ. ಆದ್ರೆ ಚಾಂಪಿಯನ್ಸ್ ಟ್ರೋಫಿ ವಿಚಾರಕ್ಕೆ ಬಂದಾಗ ಪಾಕಿಸ್ತಾನ ಭಾರತ ವಿರುದ್ಧ 3 ಪಂದ್ಯಗಳನ್ನು ಜಯಿಸಿದ್ದರೆ. ಭಾರತ ಎರಡು ಪಂದ್ಯಗಳನ್ನು ಜಯಸಿದೆ. 

ಇದೆಲ್ಲದರ ನಡುವೆ ಇಂದು ನಡೆಯುವ ಮ್ಯಾಚ್ ಅತ್ಯಂತ ಪ್ರಮುಖವಾಗಿದೆ. ಇಡೀ ಭಾರತೀಯ ಕ್ರಿಕೆಟ್ ಪ್ರಿಯರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೇಲೆ ದೊಡ್ಡ ನಿರೀಕ್ಷೆಯನ್ನಿಟ್ಟುಕೊಂಡು ಕುಳಿತಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಹಾಗೂ ವಿರಾಟ್ ಮೇಲೆ ಬಹಳ ನಿರೀಕ್ಷೆಯಿದ್ದು, ಅವರ ಮೇಲೆ ತೀವ್ರ ಒತ್ತಡವು ಕೂಡ ಇದೆ.