ಬೆಂಗಳೂರು: ನಾಳೆ ಲಿಂಗಾಯತ ಸಮುದಾಯದ ಸಚಿವರು ಶಾಸಕರ ಮಹತ್ವದ ಸಭೆ.!

ಬೆಂಗಳೂರು: ನಾಳೆ ಲಿಂಗಾಯತ ಸಮುದಾಯದ ಸಚಿವರು ಶಾಸಕರ ಮಹತ್ವದ ಸಭೆ.!

ಬೆಂಗಳೂರು : ನಾಳೆ ಸಂಜೆ ಜಾತಿ ಜನಗಣತಿ ವರದಿ ಬಗ್ಗೆ ಚರ್ಚಿಸಲು ವಿಶೇಷ ಸಂಪುಟ ಸಭೆಯನ್ನ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಆದರೆ ಅದಕ್ಕೂ ಮುನ್ನ ನಾಳೆ ಬೆಳಗ್ಗೆ ಲಿಂಗಾಯತ ಸಮುದಾಯದ ಸಚಿವರು ಶಾಸಕರ ಮಹತ್ವದ ಸಭೆ ನಡೆಸಲಿದ್ದಾರೆ. 

ಈಗಾಗಲೇ ಜಾತಿಜನಗಣತಿ ವರದಿ ಬಗ್ಗೆ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಬಹಿರಂಗಗೊಂಡಿರುವ ವರದಿಯಲ್ಲಿ ಅಂಕಿ ಅಂಶ ಸಾಕಷ್ಟು ವ್ಯತ್ಯಾಸದಿಂದ ಕೂಡಿದೆ ಇದು ಅವೈಜ್ಞಾನಿಕ ಇದನ್ನ ಸಂಪುಟ ಸಭೆ ಒಪ್ಪಬಾರದು ಎಂದಿದ್ದಾರೆ. ಇದರ ನಡುವೆ ಈ ವರದಿ ಚರ್ಚಿಸಲು ನಾಳೆ ವಿಶೇಷ ಸಚಿವ ಸಂಪುಟ ಸಭೆಯನ್ನ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಇದಕ್ಕೂ ಮುನ್ನ ಲಿಂಗಾಯತ ಸಮುದಾಯದ ಸಚಿವರ ಮತ್ತು ಶಾಸಕರು ಬೆಳಗ್ಗೆ 9 ಗಂಟೆಗೆ ಸಭೆ ನಡೆಸಲಿದ್ದಾರೆ. 

ಸಂಪುಟ ಸಭೆಯಲ್ಲಿ ಯಾವ ರೀತಿ ತಮ್ಮ ನಿರ್ಣಯ ಹೇಳಬೇಕು ಎಂಬುದನ್ನ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಲಿಂಗಾಯತ ಅಷ್ಟೇ ಅಲ್ದೇ ನಿನ್ನೆ ಒಕ್ಕಲಿಗ ಸಮುದಾಯ ಸಚಿವರು ಶಾಸಕರು ಸಹ ನಿನ್ನೆ ಸಭೆ ನಡೆಸಿದ್ದಾರೆ. ಬಹುತೇಕ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಈ ವರದಿಯ ಅಂಶವನ್ನ ಒಪ್ಪುತ್ತಿಲ್ಲ ಆದರೆ ಈ ಸಮುದಾಯದ ಮನವಿಗೆ ಸರ್ಕಾರ ಸ್ಪಂದಿಸಲಿದ್ಯಾ .? ನಾಳೆ ಸಂಪುಟ ಸಭೆಯಲ್ಲಿ ಯಾವ ತೀರ್ಮಾನವಾಗಲಿದೆ ಎಂಬುದು ಸಧ್ಯಕ್ಕೆ ಕುತೂಹಲ ಮೂಡಿಸಿದೆ. ಒಂದು ವೇಳೆ ಸಮುದಾಯಕ್ಕೆ ವ್ಯತಿರಿಕ್ತವಾಗಿ ಸಚಿವ ಸಂಪುಟ ತಿರ್ಮಾನ ತೆಗೆದುಕೊಂಡರೆ ಈ ಸಮುದಾಯದ ಸಚಿವರು ಶಾಸಕರ ನಿಲುವು ಏನಾಗಿರುತ್ತೆ ಎಂಬುದನ್ನ ಕಾದುನೋಡಬೇಕಿದೆ.