ಗುಜರಾತ್‌ನ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಬಂಧನ

ಗುಜರಾತ್‌ನ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಬಂಧನ

ಅಹ್ಮದಾಬಾದ್: ಗುಜರಾತ್‌ನ ಕಾಂಗ್ರೆಸ್‌ ಶಾಸಕ ಹಾಗೂ ದಲಿತ ಸಂಘಟನೆಯ ಮುಖಂಡ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೋಲಿಸರು ನಿನ್ನೆ (ಬುಧವಾರ) ರಾತ್ರಿ ಬಂಧಿಸಿದ್ದಾರೆ. ಆದರೆ ಬಂಧನಕ್ಕೆ ಇನ್ನೂ ಸೂಕ್ತ ಕಾರಣ ತಿಳಿದು ಬಂದಿಲ್ಲ. 'ನನಗೆ ಯಾವುದೇ ಎಫ್‌ಐಆರ್‌ನ ಕಾಪಿ ನೀಡದೆ ಬಂಧಿಸಿದ್ದಾರೆ' ಎಂದು ಮೇವಾನಿ ಆರೋಪಿಸಿದ್ದಾರೆ. ಆದರೆ ಅವರು ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಕೆಲವು ಮಾಹಿತಿಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೇವಾನಿ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಮೇವಾನಿ ಅವರನ್ನು ಅಹ್ಮದಾಬಾದ್‌ನಿಂದ ಗುಹಾಟಿಗೆ ಸ್ಥಳಾಂತರಿಸಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.