ನ.8 ರಿಂದ ಎಲ್ ಕೆಜಿ,ಯುಕೆಜಿ ಆರಂಭ

ನ.8 ರಿಂದ ಎಲ್ ಕೆಜಿ,ಯುಕೆಜಿ ಆರಂಭ

ಬೆಂಗಳೂರು: ರಾಜ್ಯದಲ್ಲಿ ನ.8 ರಿಂದ ಪೂರ್ವ ಪ್ರಾಥಮಿಕ ತರಗತಿಗಳಾದ ಯುಕೆಜಿ ಮತ್ತು ಎಲ್ ಕೆಜಿ ಶಾಲೆಗಳನ್ನು ತೆರೆಯಲು ಸರ್ಕಾರ ಸೂಚನೆ ನೀಡಿದೆ. ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ತೆರೆಯಬೇಕು. ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರವೆರೆಗೆ ತರಗತಿ ನಡೆಸಲು ಸೂಚಿಸಿದೆ. ಕೋವಿಡ್ 19 ಸೋಂಕಿನ ಪ್ರಮಾಣ 2%ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಮಾತ್ರ ಇದು ಅನ್ವಯವಾಗುತ್ತದೆ. ಪೂರ್ವ ಪ್ರಾಥಮಿಕ ಮಕ್ಕಳಿಗೆ ಮನೆಯಿಂದಲೇ ಉಪಹಾರ ಮತ್ತು ಕುಡಿಯುವ ನೀರನ್ನು ಕಳುಹಿಸುವಂತೆ ಎಲ್ಲಾ ಪೋಷಕರಿಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ.