ತಿರುಮಲ ವೆಂಕಟೇಶ್ವರನ ದರ್ಶನಕ್ಕೆ 1.5 ಕೋಟಿ ರೂ.! : ಬಂದ ಹಣವನ್ನು ಏನು ಮಾಡುವರು ಗೊತ್ತೇ?

ತಿರುಮಲ ವೆಂಕಟೇಶ್ವರನ ದರ್ಶನಕ್ಕೆ 1.5 ಕೋಟಿ ರೂ.! : ಬಂದ ಹಣವನ್ನು ಏನು ಮಾಡುವರು ಗೊತ್ತೇ?

ತಿರುಮಲ : ತಿರುಮಲ ವೆಂಕಟೇಶ್ವರ ದೇವಾಲಯದ ಆಡಳಿತಮಂಡಳಿಯು “ಉದಯಾಸ್ತಮಾನ ಸೇವೆ’ ಎಂಬ ಜಗತ್ತಿನಲ್ಲೇ ಅತ್ಯಂತ ದುಬಾರಿ ‘ಸೇವೆ’ಯನ್ನು ಪರಿಚಯಿಸಲು ಮುಂದಾಗಿದೆ. ಈ ಸೇವೆಗೆ ತಗಲುವ ವೆಚ್ಚ ಬರೋಬ್ಬರಿ 1 ಕೋಟಿ ರೂ.ಗಳಿಂದ ಒಂದೂವರೆ ಕೋಟಿ ರೂ.! ಅಚ್ಚರಿಯಾದರೂ ಇದು ಸತ್ಯ. ಕೋಟಿ ರೂಪಾಯಿ ಪಾವತಿಸುವ ಭಕ್ತರು ಮತ್ತು ಅವರ ಕುಟುಂಬದ ಐವರು ಸದಸ್ಯರು ಗರ್ಭಗುಡಿಯ ಸಮೀಪ ಮತ್ತು ಇತರೆ ನಿರ್ದಿಷ್ಟ ಪ್ರದೇಶಗಳಲ್ಲಿ ಇಡೀ ದಿನ ಕುಳಿತು ಬೆಳಗ್ಗಿನ ಸುಪ್ರಭಾತಂನಿಂದ ಹಿಡಿದು ಸಂಜೆಯ ಏಕಾಂತ ಸೇವೆಯವರೆಗೆ ತಿಮ್ಮಪ್ಪನಿಗೆ ಸಲ್ಲುವ ಎಲ್ಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಬಹುದು. ಶುಕ್ರವಾರ ಮಾತ್ರ ಅಭಿಷೇಕಂ ನೋಡಲು ಅವಕಾಶವಿರುವ ಕಾರಣ, ಇದರ ಮೊತ್ತ ಒಂದೂವರೆ ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ. ಎಷ್ಟು ಮಂದಿಗೆ ಅವಕಾಶ ಕಲ್ಪಿಸುವುದು, ಎಷ್ಟು ವರ್ಷಗಳ ಕಾಲ ಈ ಸೇವೆ ನೀಡುವುದು ಎಂಬ ಬಗ್ಗೆ ಅಂತಿಮ ನಿರ್ಧಾರ ಸದ್ಯದಲ್ಲೇ ಪೂರ್ಣಗೊಳಲಿದೆ. ಇನ್ನು ಇದರಿಂದ ಬರುವ ಮೊತ್ತವನ್ನು ಸಂಪೂರ್ಣವಾಗಿ ಸೂಪರ್ ಸ್ಪೆಷಾಲಿಟಿ ಮಕ್ಕಳ ಹೃದ್ರೋಗ ಆಸ್ಪತ್ರೆಯ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಟಿಟಿಡಿ ಹೇಳಿದೆ.