ಡಿಡಿಸಿಎ ಅಧ್ಯಕ್ಷರಾಗಿ ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಮರುಆಯ್ಕೆ

ಡಿಡಿಸಿಎ ಅಧ್ಯಕ್ಷರಾಗಿ ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಮರುಆಯ್ಕೆ

ನವದೆಹಲಿ: ಕ್ರಿಕೆಟಿಗ ಮತ್ತು ಸಂಸದ ಕೀರ್ತಿ ಆಜಾಸದ್ ಅವರನ್ನು ಮಣಿಸಿ ಸತತ ಮೂರನೇ ಅವಧಿಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಮಂಡಳಿಯ(ಡಿಡಿಸಿಎ) ಅಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಮಗ ರೋಹನ್ ಜೇಟ್ಲಿ ಆಯ್ಕೆಯಾಗಿದ್ದಾರೆ. 

ದೆಹಲಿ ಕ್ರಿಕೆಟ್ ಮಂಡಳಿಯಲ್ಲಿ 1,000 ಅಧಿಕ ಮತಗಳನ್ನು ನಿಯಂತ್ರಿಸುವ ಬಿಸಿಸಿಐನ ಮಾಜಿ ಕಾರ್ಯಾಧ್ಯಕ್ಷ ಸಿ.ಕೆ. ಖನ್ನಾ ರೋಹನ್ ಅವರನ್ನು ಬೆಂಬಲಿಸಿದ್ದರು.ಖನ್ನಾ ಪುತ್ರಿ ಶಿಖಾ ಕುಮಾರ್ (1,246 ಮತ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಅಶೋಕ್ ಶರ್ಮಾ (893) ಕಾರ್ಯದರ್ಶಿಯಾಗಿ, ಹರೀಶ್ ಶಿಂಗ್ಲಾ (1328)ಖಜಂಚಿಯಾಗಿ ಆಯ್ಕೆಯಾದರು.ಎಲ್ಲ ಪದಾಧಿಕಾರಿಗಳನ್ನು ಮೂರು ಅವಧಿಗೆ ಆಯ್ಕೆ ಮಾಡಲಾಗಿದೆ.