ರಾಜ್ಯದ ಜನತೆಗೆ ಸಿಹಿ ಸುದ್ದಿ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ. ಈ ಸುದ್ದಿ ಬೇಸಿಗೆಗೆ ಸಂಬಂಧಿಸಿದ್ದೇ ಆಗಿದೆ. ಹವಾಮಾನ ವೈಪರಿತ್ಯದಿಂದ ಈ ಸಲ ನಾಲ್ಕು ತಿಂಗಳು ಬೇಸಿಗೆ ಇರುತ್ತದೆ ಅಂತಲೇ ಹವಾಮಾನ ಇಲಾಖೆ ಹೇಳಿತ್ತು.ಆದರೆ, ಈಗ ಇದೇ ಇಲಾಖೆ ಬೇರೆ ರೀತಿಯ ಮಾಹಿತಿ ಕೊಟ್ಟಿದೆ. ಎಂದಿನಂತೆ ಈ ಸಲ ಬೇಸಿಗೆ ಇರುತ್ತದೆ. ರಣ ಬಿಸಿಲು ಇರೋದೇ ಇಲ್ಲ. ಉಷ್ಣಾಂಶದಲ್ಲಿ ಒಂದೆರಡು ಡಿಗ್ರಿ ಸೆಲ್ಸಿಯಸ್ ಇಳಿಕೆ ಕೂಡ ಆಗೋ ಚಾನ್ಸ್ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.