ಪದವಿ ಪ್ರವೇಶಕ್ಕೆ ಉಚಿತ ಅರ್ಜಿ, ಸೆಪ್ಟೆಂಬರ್ 1 ರಿಂದಲೇ ಪಾಠ ಶುರು

ಪದವಿ ಪ್ರವೇಶಕ್ಕೆ ಉಚಿತ ಅರ್ಜಿ, ಸೆಪ್ಟೆಂಬರ್ 1 ರಿಂದಲೇ ಪಾಠ ಶುರು

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಮತ್ತು ಇತರೆ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ತಕ್ಷಣದಿಂದ ಆರಂಭಿಸಲು ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಸೂಚನೆ ನೀಡಿದ್ದಾರೆ. 

ಸೆಪ್ಟೆಂಬರ್ 1 ರಿಂದ ಆನ್ಲೈನ್ ತರಗತಿ ಶುರುವಾಗಲಿದ್ದು, ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಲ್ಲಿ ಅಕ್ಟೋಬರ್ 1 ರಿಂದ ರೆಗ್ಯುಲರ್ ತರಗತಿಗಳು ಆರಂಭವಾಗಲಿವೆ ಎಂದು ಹೇಳಲಾಗಿದೆ. 

ತಕ್ಷಣದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ಅರ್ಜಿ ವಿತರಿಸಲು ಎಲ್ಲಾ ಕಾಲೇಜುಗಳಿಗೆ ಡಿಸಿಎಂ ಸೂಚನೆ ನೀಡಿದ್ದಾರೆ. ಅಂತಿಮ ಪದವಿ ಪರೀಕ್ಷೆಗಳನ್ನು ಆದಷ್ಟು ಬೇಗ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸುವಂತೆ ತಿಳಿಸಿದ್ದಾರೆ.