ಭಾರತದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಮೇಲೆ ಉತ್ಪಾದನೆಯಾದ ದೇಶದ ಟ್ಯಾಗ್ ಹಾಕುವುದು

ಕಡ್ಡಾಯ: ಕೇಂದ್ರ ನಾಗರಿಕ ಪೂರೈಕೆ ಇಲಾಖೆ ಆದೇಶ
ಮೇಲೆ ಯಾವ ದೇಶದಲ್ಲಿ ಉತ್ಪಾದನೆಯಾಗಿದೆ ಎಂಬ ಟ್ಯಾಗ್ ಹಾಕುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿ, ಕೇಂದ್ರ ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದ್ದುದೆ.
ಉತ್ಪಾದನೆ ಮಾಡಿದ ದೇಶಗಳ ಮಾಹಿತಿ ಪ್ರಕಟಿಸುವಂತೆ ಕೇಂದ್ರ ನಾಗರಿಕ ಪೂರೈಕೆ ಇಲಾಖೆಯು ಉತ್ಪಾದನಾ ಕಂಪನಿಗಳಿಗೆ ಮತ್ತು ಈ-ಕಾಮರ್ಸ್ ಕಂಪನಿಗಳಿಗೆ ಸೂಚನೆ ನೀಡಿದೆ. ಉತ್ಪನ್ನದ ಹೆಸರು, ಪ್ಯಾಕ್ ನಲ್ಲಿ ಉತ್ಪನ್ನ ಎಷ್ಟಿದೆ ಎಂಬುದರ ಪ್ರಮಾಣ, ಉತ್ಪಾದಿಸಿದ ದಿನಾಂಕ, ಎಕ್ಸ್ ಪೆರಿ ಡೇಟ್ ಮತ್ತು ದರಗಳ ಜತೆಗೆ ಯಾವ ದೇಶದಲ್ಲಿ ಉತ್ದಾದನೆಯಾಗಿದೆ ಎಂಬ ಟ್ಯಾಗ್ ಪ್ರಕಟಿಸಲೇಬೇಕು ಎಂದು ತಾಕೀತು ಮಾಡಿದೆ.
ಉತ್ಪನ್ನಗಳ ದೇಶದ ಮೂಲವನ್ನು ಪ್ರದರ್ಶಿಸಬೇಕಾದ ನಿಯಮ ಪಾಲಿಸದಿದ್ದರೆ ಮೊದಲೆರಡು ಬಾರಿ ಕೇವಲ ದಂಡ ವಿಧಿಸಲಾಗುವುದು. ಮೂರನೇ ಬಾರಿ ದಂಡದ ಜತೆಗೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೊದಲ ಸಲ ನಿಯಮ ಉಲ್ಲಂಘನೆ ಮಾಡಿದರೆ 25 ಸಾವಿರ ರೂ. ದಂಡ, ಎರಡನೇ ಸಲ ನಿಯಮ ಉಲ್ಲಂಘಿಸಿದರೆ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಮೂರನೇ ಸಲ ನಿಯಮ ಉಲ್ಲಂಘಿಸಿದರೆ 1.5 ಲಕ್ಷ ರೂ. ದಂಡ ವಿಧಿಸುವುದರ ಜೊತೆಗೆ ಅಂತಹ ಕಂಪನಿಗಳು ಮತ್ತು ಈ-ಕಾಮರ್ಸ್ ಕಂಪನಿಗಳಿಗೆ ಒಂದು ವರ್ಷ ನಿಷೇಧ ಹೇರಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.