ಬಾಗಲಕೋಟೆ: ಹಿಜಾಬ್-ಕೇಸರಿ ಶಾಲು ಪ್ರತಿಭಟನೆ:ಕಲ್ಲು-ಚಪ್ಪಲಿ ತೂರಾಟ:ಒಬ್ಬನಿಗೆ ಗಾಯ
ಬಾಗಲಕೋಟೆ: ಹಿಜಾಬ್ ಮತ್ತು ಕೇಸರಿ ವಿವಾದ ಇಡೀ ರಾಜ್ಯವನ್ನೇ ಆವರಿಸಿಕೊಂಡಿದೆ. ಬಿಸಿರಕ್ತದ ಯುವಕರೆಲ್ಲ ರೊಚ್ಚಿಗೆದ್ದು ಕಲ್ಲು ತೂರಿ-ಚಪ್ಪಲಿ ಎಸೆಯುತ್ತಿದ್ದಾರೆ. ಹೌದು ! ಈ ಘಟನೆ ಇಂದು ಜಿಲ್ಲೆಯ ಬನಹಟ್ಟಿಯ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ನಡೆದಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುತ್ತ-ಮುತ್ತು ಗೊಂದಲ ಮಯ ವಾತಾವರಣವೇ ಸೃಷ್ಟಿ ಆಗಿತ್ತು. ಒಂದು ಕಡೆಗೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟಿಸುತ್ತಿದ್ದರು. ಇನ್ನೊಂದು ಕಡೆಗೆ ಹಿಜಾಬ್ ಧರಿಸಿರೋ ವಿದ್ಯಾರ್ಥಿನಿಯರು ಕಾಲೇಜ್ ಒಳಗಡೆ ನುಗ್ಗಲು ಪ್ರಯತ್ನಿಸುತ್ತಿದ್ದರು. ಇವರೆಲ್ಲರ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಪೊಲೀಸರು ಇಲ್ಲಿ ಬಿಗಿ ಭದ್ರತೆ ಒದಗಿಸಿದ್ದರು. ಆದರೂ ಕೂಡ ಇಲ್ಲಿ ಕಲ್ಲು ಮತ್ತು ಚಪ್ಪಲಿ ತೂರಾಟವೇ ನಡೆದು ಹೋಯಿತು. ಇದರಿಂದ ಒಬ್ಬನಿಗೆ ಗಾಯವಾಗಿದೆ. ಉಳಿದಂತೆ ಇಲ್ಲಿ ಗೊಂದಲಮಯ ವಾತಾವರಣವೇ ಸೃಷ್ಟಿಯಾಗಿತ್ತು.