BREAKING : ಮೈಸೂರಿಗೆ ಹೋಗಲು ನಟ ದರ್ಶನ್‌ಗೆ ಗ್ರೀನ್ ಸಿಗ್ನಲ್..!

BREAKING : ಮೈಸೂರಿಗೆ ಹೋಗಲು ನಟ ದರ್ಶನ್‌ಗೆ ಗ್ರೀನ್ ಸಿಗ್ನಲ್..!

ಬೆಂಗಳೂರು : 4 ವಾರಗಳ ಕಾಲ ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ಕಾಲಾವಕಾಶ ಕೋರಿದ್ದ ನಟ ದರ್ಶನ್‌ಗೆ ಕೋರ್ಟ್‌ನಿಂದ ಅನುಮತಿ ಸಿಕ್ಕಿದೆ.

4 ವಾರಗಳ ಕಾಲ ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ನಟ ದರ್ಶನ್ ಕಾಲಾವಕಾಶ ಕೋರಿದ್ದರು.. ಈ ಕುರಿತು ದರ್ಶನ್ ಪರ ವಕೀಲರಿಂದ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 

ಹೈಕೋರ್ಟ್ ಜಾಮೀನು ನೀಡುವಾಗ ಷರತ್ತು ವಿಧಿಸಿತ್ತು. ಕೋರ್ಟ್ ಅನುಮತಿಯಿಲ್ಲದೇ ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ತಿಳಿಸಲಾಗಿತ್ತು. ಇನ್ನು ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಎಸ್‌ಪಿಪಿ ಗೆ 57ನೇ ಸಿಸಿಹೆಚ್ ಕೋರ್ಟ್ ಸೂಚನೆ ಕೊಡಲಾಗುತ್ತು. 

ಈ ಹಿನ್ನೆಲೆಯಲ್ಲಿ ಸದ್ಯ 4 ವಾರಗಳ ಕಾಲ ಮೈಸೂರಿಗೆ ತೆರಳಲು ದರ್ಶನ್ ಕೋರ್ಟ್‌ ಅನುಮತಿ ನೀಡಿದೆ.