IPL 2024 | MI vs SRH: ಹೈದರಾಬಾದ್‌ಗೆ 31 ರನ್‌ಗಳಿಂದ ಭರ್ಜರಿ ಗೆಲುವು - ಮುಂಬೈಗೆ ಮತ್ತೊಂದು ಸೋಲು

ಹೈದರಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 31 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 17ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಸಿಡಿಸಿತ್ತು. ಹೈದರಾಬಾದ್ ಪರ ಹೆನ್ರಿಚ್ ಕ್ಲಾಸೆನ್ 80 ರನ್, ಟ್ರಾವಿಸ್ ಹೆಡ್ 62 ರನ್, ಅಭಿಷೇಕ್ ಶರ್ಮಾ 63 ರನ್ ಹಾಗೂ ಐಡೆನ್ ಮಾರ್ಕ್ರಾಮ್ 42 ರನ್ ಚಚ್ಚಿದ್ದರು.
ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಸೋಲು ಒಪ್ಪಿಕೊಂಡಿದೆ. ತಂಡದ ಪರ ತಿಲಕ್ ವರ್ಮಾ 64 ರನ್, ಟಿಮ್ ಡೇವಿಡ್ 42 ರನ್, ನಮನ್ ಧೀರ್ 34, ಇಶಾನ್ ಕಿಶನ್ 30 ರನ್, ರೋಹಿತ್ ಶರ್ಮಾ 26 ರನ್, ಹಾರ್ದಿಕ್ ಪಾಂಡ್ಯ 24 ರನ್ ಗಳಿಸಿದರು.