ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳಿಗೆ ಚಳಿಗಾಲದ ರಜೆ : ಎಲ್ಲಿಂದ ಎಲ್ಲಿಯವರೆಗೆ?

ಬೆಂಗಳೂರು: ಶಾಲಾ ಕಾಲೇಜುಗಳಿಗೆ ಇರುವಂತೆ ಕೋರ್ಟ್ ಗಳಿಗೂ ರಜೆಗಳಿರುತ್ತವೆ. ಸದ್ಯ ರಾಜ್ಯ ಹೈಕೋರ್ಟ್ ಗೆ ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶದ ಅನುಸಾರ ನ್ಯಾಯಾಂಗ ರಿಜಿಸ್ಟ್ರಾರ್ ಕೆ.ಎಸ್. ಭರತ್ ಕುಮಾರ್ ನೋಟಿಫಿಕೇಶನ್ ಹೊರಡಿಸಿದ್ದಾರೆ. ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಹೈಕೋರ್ಟ್ ನ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ಪೀಠಗಳಿಗೆ ಚಳಿಗಾಲದ ರಜೆ ಇರುತ್ತದೆ. ರಜೆ ಅವಧಿಯಲ್ಲಿ ದೈನಂದಿನ ಕಲಾಪಗಳು ನಡೆಯುವುದಿಲ್ಲ. ಡಿಸೆಂಬರ್ 27 ರಂದು ಬೆಂಗಳೂರು ಪ್ರಧಾನ ಪೀಠದಲ್ಲಿ ರಜಾ ಕಾಲದ ನ್ಯಾಯಪೀಠಗಳು ನಡೆಯಲಿದ್ದು, ತುರ್ತು ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಲಾಗುತ್ತದೆ.