ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ; ಭಾರತಕ್ಕೆ ಬೆಳ್ಳಿ

ಯುವೆಲಾ, ಸ್ಪೇನ್ : ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ ಕಿದಂಬಿ ಅವರಿಗೆ ಬೆಳ್ಳಿಗೆ ಪದಕ ಸಂದಿದೆ. ಪುರುಷರ ವಿಭಾಗದಲ್ಲಿ ಈ ಹಿಂದೆ ಪ್ರಕಾಶ್ ಪಡುಕೋಣೆ, ಬಿ. ಸಾಯಿಪ್ರಣೀತ್ ಅವರು ಕಂಚಿನ ಪದಕ ಗೆದ್ದಿದ್ದರು. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಸಿಂಗಪುರದ ಲೋಹ್ ಕೀನ್ ಯೆವ್ ಎದುರು ಸೋಲು ಅನುಭವಿಸಿದರು. ಆಟದ 43 ನಿಮಿಷಗಳ ಹೋರಾಟದಲ್ಲಿ ಕಿದಂಬಿ, 15-21, 20-22 ನೇರ ಸೆಟ್ ಗಳಿಂದ ಸೋಲು ಕಂಡರು.