ಜಾಗತಿಕ ಟಾಪ್ ಟೆನ್ ಮಟ್ಟಕ್ಕೆ ಬೆಳೆಯುವವರೆಗೂ ನಮಗೆ ತೃಪ್ತಿ ಇಲ್ಲ - ಮುಕೇಶ್ ಅಂಬಾನಿ

ಜಾಗತಿಕ ಟಾಪ್ ಟೆನ್ ಮಟ್ಟಕ್ಕೆ ಬೆಳೆಯುವವರೆಗೂ ನಮಗೆ ತೃಪ್ತಿ ಇಲ್ಲ - ಮುಕೇಶ್ ಅಂಬಾನಿ

ನವದೆಹಲಿ: ನಾವು ಜಗತ್ತಿನ ಅತಿದೊಡ್ಡ ತೈಲ ಸಂಸ್ಕರಣಾ ಸಮುಚ್ಚಯ ನಿರ್ಮಿಸಿದ್ದೇವೆ. ದೇಶದ ಅತಿದೊಡ್ಡ ಮೊಬೈಲ್ ನೆಟ್‌ವರ್ಕ್ ಆಪರೇಟರ್ ಆಗಿ ಬೆಳೆದಿದ್ದೇವೆ. ಆದರೆ ರಿಲಯನ್ಸ್ ಸಮೂಹಕ್ಕೆ ಇದರಿಂದ ತೃಪ್ತಿ ಇಲ್ಲ. ನಾವು ಜಾಗತಿಕ ಟಾಪ್ ಟೆನ್ ಉದ್ಯಮ ಸಮೂಹಗಳನ್ನು ಸ್ಥಾನ ಗಿಟ್ಟಿಸಿಕೊಳ್ಳಬೇಕಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ. 

ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಜನ್ಮದಿನದ ಅಂಗವಾಗಿ ಗುರುವಾರ ನಡೆದ ರಿಲಯನ್ಸ್ ಕುಟುಂಬ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

ಉದ್ಯಮಕ್ಕಾಗಿ ದೇಶೀಯ ಹಾಗೂ ಜಾಗತಿಕ ವಾತಾವರಣ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಹಾಗಾಗಿ ಉದ್ಯಮ ಕ್ಷೇತ್ರದಲ್ಲಿ ಸಂತೃಪ್ತಿಗೆ ಅವಕಾಶವೇ ಇರೋದಿಲ್ಲ. ಇದಕ್ಕೂ ಮುಂಚೆ ರಿಲಯನ್ಸ್ ತೃಪ್ತಿಪಟ್ಟುಕೊಂಡಿಲ್ಲ. ಮುಂದಿನ ದಿನಗಳಲ್ಲೂ ನಮಗೆ ನಾವು ತೃಪ್ತಿ ಹೊಂದೋದಿಲ್ಲ‌ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.