8 ಸಾವಿರದತ್ತ ಮುನ್ನುಗ್ಗುತ್ತಿರುವ ಡೆಂಘೀ ಪ್ರಕರಣಗಳು

8 ಸಾವಿರದತ್ತ ಮುನ್ನುಗ್ಗುತ್ತಿರುವ ಡೆಂಘೀ ಪ್ರಕರಣಗಳು

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 293 ಡೆಂಘೀ ಕೇಸ್ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 7840 ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 24 ಗಂಟೆಯಲ್ಲಿ 118 ಡೆಂಘೀ ಕೇಸ್ ಪತ್ತೆಯಾಗಿದ್ದು ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ,2292ಕೇಸ್ ದಾಖಲಾಗಿದೆ. ಇಂದು ಡೆಂಘೀಯಿಂದ ಯಾವುದೇ ಸಾವು ವರದಿಯಾಗಿಲ್ಲ. 

ಕಳೆದ 24 ಗಂಟೆಯಲ್ಲಿ 0-1 ವರ್ಷದ 2 ಮಗುವಿಗೆ ಡೆಂಘೀ ಪತ್ತೆಯಾಗಿದ್ದು ಇದುವರೆಗೆ 0-1 ವರ್ಷದ 139 ಕಂದಮ್ಮಳಿಗೆ ಡೆಂಘೀ ಕಾಣಿಸಿ ಕೊಂಡಿದೆ. ಕಳೆದ 24 ಗಂಟೆಯಲ್ಲಿ 1-18 ವರ್ಷದ 101 ಮಕ್ಕಳಿಗೆ ಡೆಂಘೀ 

ಬಂದ್ರೆ ಇದುವರೆಗೆ ರಾಜ್ಯದಲ್ಲಿ2741 ಮಕ್ಕಳಿಗೆ ಡೆಂಘೀ ಪತ್ತೆ ಆಗಿದೆ. 

ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 190 ಮಂದಿಗೆ ಡೆಂಘೀ ಅಟ್ಯಾಕ್ ಆಗಿದ್ದು ಇದುವರೆಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4960 ಮಂದಿಗೆ ಡೆಂಘೀ ಸೋಂಕು ತಗುಲಿದೆ.