ನ.10ರಿಂದ ಮೈಸೂರಿಗೆ ವಂದೇ ಭಾರತ್ ರೈಲು

ಮೈಸೂರು: ಸ್ವದೇಶಿ ನಿರ್ಮಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಐದನೇ ರೈಲು ನವೆಂಬರ್ 10ರಿಂದ ಚೆನ್ನೈ- ಬೆಂಗಳೂರು ಮೈಸೂರು ಮಾರ್ಗಗಳಲ್ಲಿ ಸಂಚರಿಸಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ
ವಂದೇ ಭಾರತ್ ಎಕ್ಸ್‌ಪ್ರೆಸ್ ಸರಣಿಯ 4ನೇ ರೈಲಿಗೆ ಪ್ರಧಾನಿ ಮೋದಿ ಹಿಮಾಚಲ ಪ್ರದೇಶ ದಲ್ಲಿ ಚಾಲನೆ ನೀಡಿದ್ದರು ಇದೀಗ ನವೆಂಬರ್ 10ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನ 5ನೇ ರೈಲಿಗೆ ಚಾಲನೆ ಸಿಗಲಿದ್ದು, ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಇದಾಗಿದೆ. ಈ ರೈಲು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.