ವಿಶ್ವ ಚೆಸ್ ಚಾಂಪಿಯನ್ ಕಾರ್ಲ್‌ಸನ್‌ರನ್ನ ಸೋಲಿಸಿ ಇತಿಹಾಸ ಸೃಷ್ಟಿಸಿದ ಭಾರತದ ಗ್ರ್ಯಾಂಡ್‍ ಮಾಸ್ಟರ್

ವಿಶ್ವ ಚೆಸ್ ಚಾಂಪಿಯನ್ ಕಾರ್ಲ್‌ಸನ್‌ರನ್ನ ಸೋಲಿಸಿ ಇತಿಹಾಸ ಸೃಷ್ಟಿಸಿದ ಭಾರತದ ಗ್ರ್ಯಾಂಡ್‍ ಮಾಸ್ಟರ್

ನವದೆಹಲಿ: ಭಾರತದ 16 ವರ್ಷ ವಯಸ್ಸಿನ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಡಿ ಅವರು ವಿಶ್ವ ಚಾಂಪಿಯನ್ ಆದ ನಂತರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಚೆಸ್ ಆಟಗಾರ ಎಂಬ ಇತಿಹಾಸವನ್ನು ಸೃಷ್ಟಿಸಿದರು. 

ಏಮ್‌ಚೆಸ್‌ ರ‍್ಯಾಪಿಟ್‌ನ ಒಂಬತ್ತನೇ ಸುತ್ತಿನಲ್ಲಿ ವಿಶ್ವದ ನಂಬರ್ ಒನ್ ಆಟಗಾರನನ್ನು ಸೋಲಿಸುವ ಮೂಲಕ ಗುಕೇಶ್ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ನಡೆದ ಟೂರ್ನಿಯಲ್ಲಿ ಭಾರತದ 19ರ ಹರೆಯದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಕಾರ್ಲ್‌ಸೆನ್ ಅವರನ್ನು ಸೋಲಿಸಿದ್ದರು.