ಭಾರತದಲ್ಲಿ ಏಕೀಕೃತ ಫುಡ್ ಪಾರ್ಕ ಗೆ 16 ಸಾವಿರ ಕೋಟಿ ಹೂಡಿಕೆಗೆ ಯುಎಇ ರೆಡಿ !

ನವದೆಹಲಿ:ಭಾರತದಾದ್ಯಂತ ಏಕೀಕೃತ "ಫುಡ್ ಪಾರ್ಕ್" ಅಭಿವೃದ್ಧಿ ಪಡಿಸಲು ಯನೈಟೆಡ್‌ಅರಬ್ ಎಮಿರೇಟ್ಸ್ ಮುಂದೆ ಬಂದಿದ್ದು,16 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ.
ಇಸ್ರೆಲ್, ಭಾರತ, ಅಮೆರಿಕ,ಯುಎಇ ದೇಶವನ್ನ ಒಳಗೊಂಡ ಐ2ಯು2 ವರ್ಚ್ಯುಲ್ ಸಮ್ಮೇಳನದಲ್ಲಿಯೇ ಈ ಒಂದು ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ,ಅಮೆರಿಕ ಅಧ್ಯಕ್ಷ ಜೋ ಬೈಡನ್,ಇಸ್ರೆಲ್ ಪ್ರಧಾನಿ ಯಾಯಿರ್ ಲಪಿದ್ ಹಾಗೂ ಯುಎಇ ಅಧ್ಯಕ್ಷ ಮೊಹ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಒಂದು ಸಮ್ಮೇಳನದಲ್ಲಿ ಭಾಗಿ ಆಗಿದ್ದರು