ಜಮ್ಮು ಮತ್ತು ಕಾಶ್ಮೀರ ಚುನಾವಣೆ: ಕಾಂಗ್ರೆಸ್‌ನಿಂದ 6 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಜಮ್ಮು ಮತ್ತು ಕಾಶ್ಮೀರ ಚುನಾವಣೆ: ಕಾಂಗ್ರೆಸ್‌ನಿಂದ 6 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಆರು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. 

ಸೆಂಟ್ರಲ್ ಶಾಲ್ತೆಂಗ್‌ನಿಂದ ಜೆಕೆಪಿಸಿಸಿ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಅವರನ್ನು ಕಣಕ್ಕಿಳಿಸಿದೆ. ಪಕ್ಷವು ರಿಯಾಸಿಯಿಂದ ಮುಮ್ತಾಜ್ ಖಾನ್, ಮಾತಾ ವೈಷ್ಣೋದೇವಿಯಿಂದ ಭೂಪೇಂದರ್ ಜಮ್ವಾಲ್, ರಾಜೌರಿ (ಎಸ್‌ಟಿ)ಯಿಂದ ಇಫ್ತಿಕರ್ ಅಹ್ಮದ್, ತನ್ನಮಂಡಿಯಿಂದ (ಎಸ್‌ಟಿ) ಶಬೀರ್ ಅಹ್ಮದ್ ಖಾನ್ ಮತ್ತು ಸುರನ್‌ಕೋಟೆ (ಎಸ್‌ಟಿ)ಯಿಂದ ಮೊಹಮ್ಮದ್ ಶಹನವಾಜ್ ಚೌಧರಿ ಅವರನ್ನು ಕಣಕ್ಕಿಳಿಸಿದೆ.