ನ್ಯೂಜಿಲೆಂಡ್ನ್ಯೂ: ಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್‌ ರಾಜೀನಾಮೆ ಘೋಷಣೆ

ನ್ಯೂಜಿಲೆಂಡ್ನ್ಯೂ: ಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್‌ ರಾಜೀನಾಮೆ ಘೋಷಣೆ

ನ್ಯೂಜಿಲೆಂಡ್ : ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್‌ ತಮ್ಮ ಸ್ಥಾನಕ್ಕಾಗಿ ರಾಜೀನಾಮೆಯನ್ನು ಘೋಷಿಸಿಕೊಂಡಿದ್ದಾರೆ. ಪಕ್ಷದ ವಾರ್ಷಿಕ ಸಭೆಯಲ್ಲಿ ಜಸಿಂಡಾ ಅರ್ಡೆರ್ನ್‌ ಇನ್ನು ಮುಂದೆ ಪ್ರಧಾನಿ ಸ್ಥಾನದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಬೇಸಿಗೆಯ ವಿರಾಮದ ಸಮಯದಲ್ಲಿ ದೇಶವನ್ನು ಮುನ್ನಡೆಸುವ ಶಕ್ತಿ ತಮ್ಮಲ್ಲಿಲ್ಲ ಎಂದು ಹೇಳಿಕೊಂಡಿರುವ ಜಸಿಂಡಾ ಅರ್ಡೆರ್ನ್ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಇದು ಸೂಕ್ತ ಸಮಯ ಎಂದು ನಿರ್ಧರಿಸಿಕೊಂಡಿದ್ದಾರೆ. 

"ನಾನು ಕೂಡಾ ಮನುಷ್ಯಳು, ರಾಜಕಾರಣಿಗಳೆಲ್ಲರೂ ಮನುಷ್ಯರು. ಎಲ್ಲಿಯವರೆಗೆ ಸಾಧ್ಯವೋ, ದೇಶಕ್ಕಾಗಿ ಅಷ್ಟನ್ನು ಕೊಡುತ್ತೇವೆ. ತದನಂತರ ಹೊರಬರಲೇಬೇಕು. ಮತ್ತು ನನ್ನ ಪಾಲಿಗೆ ಇದು ಸರಿಯಾದ ಸಮಯ,”ಎಂದು ಹೇಳಿಕೊಂಡಿದ್ದಾರೆ. 

” ವಿಶ್ವದ ಕಿರಿಯ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅರ್ಡೆರ್ನ್ ಅಧಿಕಾರ ಅವಧಿ ಫೆಬ್ರವರಿ 7ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಪ್ರಧಾನಿ ಸ್ಥಾನಕ್ಕಾಗಿ ಮುಂದಿನ ದಿನಗಳಲ್ಲಿ ಮತದಾನ ನಡೆಯಲಿದೆ. ನ್ಯೂಜಿಲೆಂಡ್‌ನಲ್ಲಿ ಅಕ್ಟೋಬರ್ 14 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ.