ನಿಲ್ಲದ ʼಟ್ರಂಪ್‌ʼ ಸುಂಕದ ಆಟ: ಚೀನಾದ ಮೇಲೆ ಶೇ.125 ರಷ್ಟು ಸುಂಕ - ಇತರ ದೇಶಗಳಿಗೆ ತಾತ್ಕಾಲಿಕ ರಿಲೀಫ್‌

ನಿಲ್ಲದ ʼಟ್ರಂಪ್‌ʼ ಸುಂಕದ ಆಟ: ಚೀನಾದ ಮೇಲೆ ಶೇ.125 ರಷ್ಟು ಸುಂಕ - ಇತರ ದೇಶಗಳಿಗೆ ತಾತ್ಕಾಲಿಕ ರಿಲೀಫ್‌

ವಾಷಿಂಗ್ಟನ್: ಚೀನಾದಿಂದ ಆಮದು ಮಾಡಲಾಗುವ ಸರಕುಗಳ ಮೇಲೆ ಅಮೆರಿಕ ತಕ್ಷಣದಿಂದಲೇ ಶೇಕಡಾ 125ರಷ್ಟು ಸುಂಕ ವಿಧಿಸಿದ್ದು, ಇದರ ವಿವರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೂತ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ. 

ಇದರೊಂದಿಗೆ, ಅಮೆರಿಕದ ಹೊಸ ಸುಂಕ ನಿಯಮಗಳು ತಾತ್ಕಾಲಿಕವಾಗಿ ಇತರ ದೇಶಗಳಿಗೆ ಅನ್ವಯವಾಗದೆ 90 ದಿನಗಳ ಕಾಲ ವಿನಾಯತಿ ನೀಡಿದೆ. ಬಳಿಕ ಮಾತ್ರ ಹೊಸ ಸುಂಕ ಪ್ರಮಾಣಗಳನ್ನು ಇವುಗಳಿಗೆ ಜಾರಿಗೆ ತರಲಾಗುವುದು ಎಂದು ಟ್ರಂಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈ ತಾತ್ಕಾಲಿಕ ವಿನಾಯಿತಿಯಿಂದ ಈಗಾಗಲೇ ಶ್ವೇತಭವನದ ದ್ವಾರ ತಟ್ಟಿರುವ ಸುಮಾರು 75 ದೇಶಗಳಿಗೆ ಸಾಂತ್ವನೆಯ ಸುದ್ದಿಯಾಗಿದೆ ಎಂದು ತಿಳಿದುಬಂದಿದೆ. ಅವರು ಹೊಸ ಸುಂಕದಿಂದ ತಕ್ಷಣದ ಪರಿಣಾಮವನ್ನು ತಪ್ಪಿಸಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. 

ಟ್ರಂಪ್ ಘೋಷಣೆಯೊಂದಿಗೇ ಅಮೆರಿಕದ ಶೇರು ಮಾರುಕಟ್ಟೆ ಚೇತರಿಕೆ ಕಾಣಿಸಿದ್ದು, ಕೆಲ ಮೌಲ್ಯಪ್ರದ ಷೇರುಗಳು ಏರಿಕೆ ಕಂಡಿವೆ. ಆದರೆ ಈ ಘೋಷಣೆ ಕ್ರೂಡ್‌ ಆಯಿಲ್ ಮಾರುಕಟ್ಟೆಯಲ್ಲಿ ತೀವ್ರ ತಲ್ಲಣವನ್ನುಂಟು ಮಾಡಿದೆ.