SSLC ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: SSLC ಬೋರ್ಡ್‌ನಿಂದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 1ರಿಂದ 15ರ ವರೆಗೂ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಆಕ್ಷೇಪಣೆ ಸಲ್ಲಿಸಲು ನವೆಂಬರ್ 28ರ ವರೆಗೂ ಅವಕಾಶ ನೀಡಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ 1ರಂದು ಪ್ರಥಮ ಭಾಷೆ ವಿಷಯ,ಏಪ್ರಿಲ್ 4 ಗಣಿತ, ಏಪ್ರಿಲ್ 6 ದ್ವಿತೀಯ ಭಾಷೆ ವಿಷಯ, ಏಪ್ರಿಲ್ 10 ವಿಜ್ಞಾನ, ಏಪ್ರಿಲ್ 12 ತೃತೀಯ ಭಾಷೆ ವಿಷಯ, ಏಪ್ರಿಲ್ 15 ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು SSLC ಬೋರ್ಡ್ ತೀರ್ಮಾನಿಸಿದೆ.