ಜಮ್ಮು-ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ

ಜಮ್ಮು-ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ

ಶ್ರೀನಗರ: ಇಂದು ಮಂಗಳವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ. 

ಸದ್ಯ ಜಮ್ಮು-ಕಾಶ್ಮೀರದ ಜನತೆ ಆತಂಕದಲ್ಲಿದ್ದಾರೆ. ಭೂಮಿಯ 5 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದ್ದು ಇದುವರೆಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.