ಬೆಂಗಳೂರು ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್ - 11 ವರ್ಷಗಳ ನಂತರ ನೀರಿನ ದರ ಏರಿಕೆ

ಬೆಂಗಳೂರು ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್ - 11 ವರ್ಷಗಳ ನಂತರ ನೀರಿನ ದರ ಏರಿಕೆ

ಬೆಂಗಳೂರು: ರಾಜಧಾನಿಯ ಸಿಲಿಕಾನ್ ಸಿಟಿ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಉಂಟಾಗಿದೆ. ಈಗಾಗಲೇ ಬಸ್ ದರದಿಂದ ಹಿಡಿದು ಹಾಲು ದರವರೆಗೆ ಏರಿಕೆಯ ಹೊಡೆತ ಎದುರಿಸುತ್ತಿರುವ ಬೆಂಗಾಲೂರಿಗರಿಗೆ, ನಾಳೆಯಿಂದ ನೀರಿನ ದರ ಕೂಡ ಏರಿಕೆಯಾಗಲಿದೆ. 

11 ವರ್ಷಗಳ ನಂತರ ನೀರಿನ ದರ ಹೆಚ್ಚಳ 

ಇದು 11 ವರ್ಷಗಳ ಬಳಿಕ ಬೆಂಗಳೂರು ಜಲಮಂಡಳಿ (BWSSB) ನೀರಿನ ದರವನ್ನು ಪರಿಷ್ಕರಿಸಿರುವುದು. ಪ್ರತಿ ತಿಂಗಳು ಸುಮಾರು ₹80 ಕೋಟಿ ರೂಪಾಯಿಗಳ ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವ ಜಲಮಂಡಳಿ, ಈ ಅಂತರವನ್ನು ಮುಚ್ಚುವ ಉದ್ದೇಶದಿಂದ ದರ ಏರಿಕೆಯ ನಿರ್ಧಾರ ಕೈಗೊಂಡಿದೆ. ಮೇ ತಿಂಗಳ ಬಿಲ್ಲಿನಿಂದ ಹೊಸ ದರಗಳು ಜಾರಿಗೆ ಬರುತ್ತವೆ. 

ಹೊಸ ನೀರಿನ ದರಗಳು ಹೀಗಿವೆ: 

ಗೃಹಬಳಕೆದಾರರಿಗೆ: 

0-8000 ಲೀಟರ್: ಪ್ರತಿ ಲೀಟರ್‌ಗೆ 0.15 ಪೈಸೆ ಹೆಚ್ಚಳ 

ಉದಾಹರಣೆ: ಪ್ರತಿ 1000 ಲೀಟರ್‌ಗೆ ₹7ರಿಂದ ₹8.50ಕ್ಕೆ (₹1.50 ಹೆಚ್ಚಳ) 

8001-25000 ಲೀಟರ್: ಪ್ರತಿ ಲೀಟರ್‌ಗೆ 0.30 ಪೈಸೆ ಹೆಚ್ಚಳ 

ಉದಾಹರಣೆ: ₹11ರಿಂದ ₹14ಕ್ಕೆ (₹3 ಹೆಚ್ಚಳ) 

25001-50000 ಲೀಟರ್: ಪ್ರತಿ ಲೀಟರ್‌ಗೆ 0.80 ಪೈಸೆ ಹೆಚ್ಚಳ 

50001-100000 ಲೀಟರ್: ಪ್ರತಿ ಲೀಟರ್‌ಗೆ 1.00 ಪೈಸೆ ಹೆಚ್ಚಳ 

100001ಕ್ಕಿಂತ ಹೆಚ್ಚು ಲೀಟರ್: ಪ್ರತಿ ಲೀಟರ್‌ಗೆ 1.00 ಪೈಸೆ ಹೆಚ್ಚಳ 

ಡೊಮೆಸ್ಟಿಕ್ ಹೈ ರೈಸ್ ಬಳಕೆದಾರರಿಗೆ: 

0-2,00,000 ಲೀಟರ್: ಪ್ರತಿ ಲೀಟರ್‌ಗೆ 0.30 ಪೈಸೆ 

2,00,001-5,00,000 ಲೀಟರ್: ಪ್ರತಿ ಲೀಟರ್‌ಗೆ 0.60 ಪೈಸೆ 

5,00,001-10,00,000 ಲೀಟರ್: ಪ್ರತಿ ಲೀಟರ್‌ಗೆ 1.00 ಪೈಸೆ 

ನಾನ್-ಡೊಮೆಸ್ಟಿಕ್ / ಗೃಹೇತರ ಬಳಕೆದಾರರಿಗೆ: 

ಕೈಗಾರಿಕಾ/ಬಲ್ಕ್ ಸಪ್ಲೈ ಬಳಕೆ: ಪ್ರತಿ ಲೀಟರ್‌ಗೆ 0.90 ಪೈಸೆ 

0-10,000 ಲೀಟರ್: ಪ್ರತಿ ಲೀಟರ್‌ಗೆ 1.00 ಪೈಸೆ 

10,001-25,000 ಲೀಟರ್: ಪ್ರತಿ ಲೀಟರ್‌ಗೆ 1.30 ಪೈಸೆ 

25,001-50,000 ಲೀಟರ್: ಪ್ರತಿ ಲೀಟರ್‌ಗೆ 1.50 ಪೈಸೆ 

50,001-75,000 ಲೀಟರ್: ಪ್ರತಿ ಲೀಟರ್‌ಗೆ 1.90 ಪೈಸೆ 

75,001-1,00,000 ಲೀಟರ್: ಪ್ರತಿ ಲೀಟರ್‌ಗೆ 1.10 ಪೈಸೆ 

1,00,001 ಮತ್ತು ಅಧಿಕ: ಪ್ರತಿ ಲೀಟರ್‌ಗೆ 1.20 ಪೈಸೆ