ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿಮೆಗೊಳಿಸುತ್ತೆ ಎಂದು ಭಾವಿಸುತ್ತೇನೆ: ಟ್ರಂಪ್

ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿಮೆಗೊಳಿಸುತ್ತೆ ಎಂದು ಭಾವಿಸುತ್ತೇನೆ: ಟ್ರಂಪ್

ವಾಷಿಂಗ್ಟನ್: ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು "ಗಣನೀಯವಾಗಿ" ಕಡಿಮೆ ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

"ಆದರೆ ಏಪ್ರಿಲ್ 2 ರಂದು, ಅವರು ನಮಗೆ ವಿಧಿಸುವ ಸುಂಕಗಳನ್ನೇ ನಾವು ಅವರಿಗೂ ವಿಧಿಸುತ್ತೇವೆ" ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ದೇಶಗಳ ಮೇಲೆ ಏಪ್ರಿಲ್ 2ರಿಂದ ಪ್ರತೀಕಾರದ ಸುಂಕಗಳನ್ನು ವಿಧಿಸಲಾಗುವುದು ಎಂದು ಟ್ರಂಪ್ ಈ ಹಿಂದೆ ಘೋಷಿಸಿದ್ದರು.