73ನೇ ಗಣರಾಜ್ಯೋತ್ಸವ : ರಫೇಲ್ ಜೆಟ್ ಚಲಾಯಿಸಿದ ಭಾರತದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್

73ನೇ ಗಣರಾಜ್ಯೋತ್ಸವ : ರಫೇಲ್ ಜೆಟ್ ಚಲಾಯಿಸಿದ ಭಾರತದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್

ಹೊಸದಿಲ್ಲಿ: ವಾಯುಪಡೆ ಟ್ಯಾಬ್ಲೋದಲ್ಲಿ ರಫೇಲ್ ಜೆಟ್ ಚಲಾಯಿಸಿದ ಭಾರತದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಇಂದು ದಿಲ್ಲಿಯ ರಾಜಪಥದಲ್ಲಿ 73ನೇ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಭಾರತೀಯ ವಾಯುಪಡೆ ಟ್ಯಾಬ್ಲೋದಲ್ಲಿ ಭಾಗವಹಿಸಿದ್ದರು. ಈ ಮೂಲಕ ಭಾರತೀಯ ವಾಯುಪಡೆ (ಐಎಎಫ್) ಟ್ಯಾಬ್ಲೋದಲ್ಲಿ ಪಾಲ್ಗೊಂಡ ಕೇವಲ ಎರಡನೇ ಮಹಿಳಾ ಫೈಟರ್ ಜೆಟ್ ಪೈಲಟ್ ಎನಿಸಿದ್ದಾರೆ. ಕಳೆದ ವರ್ಷ ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಐಎಎಫ್ ಟ್ಯಾಬ್ಲೋದ ಭಾಗವಾದ ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್ ಎನಿಸಿದ್ದರು. ವಾರಾಣಸಿ ಮೂಲದ ಶಿವಾಂಗಿ ಸಿಂಗ್ ಅವರು 2017ರಲ್ಲಿ ಐಎಎಫ್ ಸೇರಿಕೊಂಡಿದ್ದರು. ಐಎಎಫ್ ಮಹಿಳಾ ಯುದ್ಧ ವಿಮಾನ ಪೈಲಟ್ ಗಳ ಎರಡನೇ ಬ್ಯಾಚ್ ಗೆ ನೇಮಕವಾಗಿದ್ದರು. ಅವರು ಮಿಗ್-21 ಬಿಸಾನ್ ಯುದ್ಧ ವಿಮಾನ ಚಾಲನೆ ಮಾಡುತ್ತಿದ್ದರು. ಬಳಿಕ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನವನ್ನು ನಡೆದ ಮೊದಲ ಮಹಿಳಾ ಪೈಲಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಅವರು ಪಂಜಾಬ್ ನ ಅಂಬಾಲಾದಲ್ಲಿ ಇರುವ ಐಎಎಫ್ ನ ಗೋಲ್ಡನ್ ಆರೋಸ್ ಸ್ಕ್ವಾಡ್ರನ್ ನ ಭಾಗವೂ ಆಗಿದ್ದಾರೆ.