ಪಕ್ಷಿಯು ಈಗ ಮುಕ್ತವಾಗಿದೆ ಎಂದ ಎಲಾನ್ ಮಸ್ಕ್

ಪಕ್ಷಿಯು ಈಗ ಮುಕ್ತವಾಗಿದೆ ಎಂದ ಎಲಾನ್ ಮಸ್ಕ್

ಸ್ಯಾನ್‌ಫ್ರಾನ್ಸಿಸ್ಕೋ: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಿದ ಬಳಿಕ ಮೊದಲ ಟ್ವೀಟ್‌ನಲ್ಲಿ 'ಈಗ ಹಕ್ಕಿ ಮುಕ್ತವಾಗಿದೆ' ಎಂದು ಹೇಳಿದ್ದಾರೆ. 

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ ಸಂಸ್ಥೆಯನ್ನು ಸಂಪೂರ್ಣವಾಗಿ ವಹಿಸಿಕೊಂಡಿದ್ದಾರೆ. ಅವರು ಟ್ವಿಟ್ಟರ್‌ನ ಕಮಾಂಡ್ ತೆಗೆದುಕೊಂಡ ತಕ್ಷಣ, ಅವರು ಕಂಪನಿಯ ನಾಲ್ವರು ಉನ್ನತ ಅಧಿಕಾರಿಗಳಿಗೆ ಗೇಟ್‌ ಪಾಸ್‌ ತೋರಿಸಿದ್ದಾರೆ. ಇವರಲ್ಲಿ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಮತ್ತು ಸಿಎಫ್‌ಒ ನೆಡ್ ಸೆಗಲ್ ಮತ್ತು ಲೀಗ್ ನೀತಿ ಮುಖ್ಯಸ್ಥ ವಿಜಯ್ ಗಡ್ಡೆ ಸೇರಿದ್ದಾರೆ. ವಿಜಯ್ ಗಡ್ಡೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆಯನ್ನು ಬ್ಯಾನ್ ಮಾಡಿದ್ದರು. ಈ ಹೆಸರುಗಳಲ್ಲಿ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರನ್ನು ಹೆಚ್ಚು ಚರ್ಚಿಸಲಾಗುತ್ತಿದೆ. ಕೆಲಕಾಲ ಎಲಾನ್ ಮಸ್ಕ್ ಮತ್ತು ಪರಾಗ್ ಅಗರವಾಲ್ ನಡುವೆ ಸಾಕಷ್ಟು ವಿವಾದಗಳು ನಡೆದಿದ್ದವು. 

ಟ್ವಿಟ್ಟರ್ ಖರೀದಿಗೆ ಮಸ್ಕ್ ಮಾಡಿರುವ ಹಣಕಾಸು ವ್ಯವಸ್ಥೆಯಲ್ಲಿ ಬಹುಪಾಲು ಸಾಲದ ರೂಪದಲ್ಲಿ ಪಡೆದ ಹಣವೇ ಆಗಿದೆ. ಇದು ಟ್ವಿಟ್ಟರ್ ಕಂಪನಿಯ ಸಾಲವಾಗಿ ಉಳಿಯಲಿದೆ. ಯಾವ ಹಣಕಾಸು ವರ್ಷದಲ್ಲಿ ಲಾಭ ತೋರಿಸದ ಟ್ವಿಟ್ಟರ್ ಈಗ ಈ ಸಾಲದ ಹೊರೆ ಹೇಗೆ ಭರಿಸುತ್ತದೆ ಪ್ರಶ್ನೆ ಎಂಬ ಪ್ರಶ್ನೆ ಎದ್ದಿದೆ.