ಬಯೋಮೆಟ್ರಿಕ್ ಹಾಜರಾತಿಗೆ ಬ್ರೇಕ್ ಹಾಕಿದ ಕೇಂದ್ರ : ವರ್ಕ್ ಫ್ರಮ್ ಹೋಮ್ ಗೆ ಹೊಸ ರೂಲ್ಸ್

ಬಯೋಮೆಟ್ರಿಕ್ ಹಾಜರಾತಿಗೆ ಬ್ರೇಕ್ ಹಾಕಿದ ಕೇಂದ್ರ : ವರ್ಕ್ ಫ್ರಮ್ ಹೋಮ್ ಗೆ ಹೊಸ ರೂಲ್ಸ್

ನವದೆಹಲಿ : ದೇಶದಲ್ಲಿ ರೂಪಾಂತರ ವೈರಸ್ ಸೇರಿದಂತೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೋಮವಾರದಿಂದ ತನ್ನ ಎಲ್ಲ ಉದ್ಯೋಗಿಗಳು ಬಯೋಮೆಟ್ರಿಕ್ ಹಾಜರಾತಿ ಹಾಕುವುದನ್ನು ಜ.31 ರವರೆಗೆ ಸ್ಥಗಿತಗೊಳಿಸಿದೆ. ಸರ್ಕಾರಿ ಉದ್ಯೋಗಿಗಳ ಆರೋಗ್ಯ ಹಾಗೂ ಸುರಕ್ಷತೆಗಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಸರ್ಕಾರಿ ಉದ್ಯೋಗಿಗಳು ಹಾಜರಾತಿಯನ್ನು ಹಾಜರಾತಿ ರೆಜಿಸ್ಟರ್ ನಲ್ಲಿ ದಾಖಲಿಸಬೇಕು. ಅಲ್ಲದೆ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಮಾಸ್ಕ್ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಆದೇಶ ಹೊರಡಿಸಲಾಗಿದೆ. ಇನ್ನು ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಹೊಸ ಕಾನೂನು ಜಾರಿಗೊಳಿಸಿದೆ. ಕೊರೊನಾ ನಂತರ ವರ್ಕ್ ಫ್ರಂ ಹೋಮ್ ಪಾಲಿಸಿ ಜಾರಿಗೆ ಬಂದಿತ್ತು. ಆದರೆ ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು ಹೆಚ್ಚು ಕೆಲಸ ಮಾಡ್ತಿದ್ದಾರೆ. ಇದು ಅವರ ಒತ್ತಡವನ್ನು ಹೆಚ್ಚಿಸಿದೆ. ಮನೆಯಲ್ಲಿಯೇ ಕೆಲಸ ಮಾಡುವುದು ನಿಂದ ಹಿಂಸೆಯಾಗುತ್ತಿದೆ. ಎನ್ನುವವರಿಗೆ ಖುಷಿ ಸುದ್ದಿಯೊಂದಿದೆ. ಕೇಂದ್ರ ಸರಕಾರ ಶೀಘ್ರದಲ್ಲೇ ಮನೆಯಿಂದಲೇ ಕಛೇರಿ ಕೆಲಸ ಮಾಡುತ್ತಿರುವ ವಿಚಾರವಾಗಿ ಕಾನೂನು ಒಂದನ್ನು ರಚಿಸಲಿದೆ. ಇದರಲ್ಲಿ ಕಂಪನಿಯು ತನ್ನ ಉದ್ಯೋಗಿ ಮನೆಯಿಂದ ಕೆಲಸ ಮಾಡುವಾಗ ಯಾವ ರೀತಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗುವುದು. ಕೋವಿಡ್ -19 ಹಿನ್ನೆಲೆ ಏಕಾಏಕಿ ಅನೇಕ ಕಂಪನಿಗಳು ಇನ್ನೂ ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುತ್ತಿವೆ. ನೂತನ ಕಾನೂನಿನಂತೆ ವರ್ಕ್ ಫ್ರಮ್ ಹೋಮ್ ನಲ್ಲಿ ಇಷ್ಟೇ ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸಮಯ ನಿಗದಿಯಾಗುವ ಸಾಧ್ಯತೆ ಇದೆ. ಇದಲ್ಲದೇ ಮನೆಯಿಂದ ಕೆಲಸ ಮಾಡುವಾಗ ವಿದ್ಯುತ್ ಮತ್ತು ಇಂಟರ್ ನೆಟ್ ನಂತಹ ವೆಚ್ಚಗಳಿಗೆ ಕಂಪನಿಯು ಎಷ್ಟು ಹಣವನ್ನು ಪಾವತಿಸಬೇಕು ಎಂಬುದನ್ನೂ ಕಾನೂನಿನಲ್ಲಿ ನಿರ್ಧರಿಸಲಾಗುತ್ತದೆ. ನಿಯಮಗಳು ಯಾವುದೆಲ್ಲ ಇರಬೇಕು ಎಂಬುದರ ಬಗ್ಗೆ ಕೂಡ ಸರಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.