ಓಹ್! ಸಚಿನ್ ಜಿ ಹೌ ಆರ್ ಯು? : ಸಿಎಂ ಸಿದ್ದರಾಮಯ್ಯ - ಸಚಿನ್ ತೆಂಡೂಲ್ಕರ್ ಮುಖಾಮುಖಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆ ಚರ್ಚಿಸಲೆಂದು ಪಕ್ಷದ ವರಿಷ್ಠರ ಕರೆಯ ಮೇರೆಗೆ ದೆಹಲಿಗೆ ದೌಡಾಯಿಸಿದ ಸಿಎಂ ಸಿದ್ದರಾಮಯ್ಯ ವರಿಷ್ಠರೊಂದಿಗಿನ ಸಭೆಯ ಬಳಿಕ ವಾಪಸ್ ತೆರಳಲೆಂದು ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಆಕಸ್ಮಿಕವಾಗಿ ಸಚಿನ್ ತೆಂಡೂಲ್ಕರ್ ಕಣ್ಣಿಗೆ ಬಿದ್ದಿದ್ದಾರೆ.
ಭಾರತದ ಕ್ರಿಕೆಟ್ ದೇವರೆಂದೇ ಕರೆಯಲ್ಪೊಡುವ ಕ್ರಿಕೆಟ್ ದಂತಕತೆ ಸಚಿನ್ ರನ್ನ ನೋಡಿ ಒಂದ್ಹೆಜ್ಜೆ ಮುಂದೆ ಇಟ್ಟಾಗ ಸಚಿನ್ ತೆಂಡೂಲ್ಕರ್ ಕೂಡ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರ ಕೈ ಕುಲುಕಿ ಆತ್ಮೀಯತೆ ಮೆರೆದರು. ಈ ವೇಳೆ ಉಭಯ ನಾಯಕರು ಕುಶಲೋಪರಿ ವಿಚಾರಿಸಿಕೊಂಡರೆಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಇದ್ದರು.